ಕಾರ್ಕಳ: ತಾಲೂಕಿನ ಈದು ಗ್ರಾಮದ ನಿವಾಸಿಗಳಾದ ಲತಾ ಹಾಗೂ ಸದಾನಂದ ಪೂಜಾರಿಯ ದಂಪತಿಯ ಪುತ್ರ ಶ್ರವಣ್ ಪೂಜಾರಿ ಅವರು ಬಂಟ್ವಾಳದಲ್ಲಿ ನಡೆದ ಭೀಕರ ಬೈಕ್ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದು ಬೆಂಗಳೂರಿನ ಎಜೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುತ್ತಾರೆ.
ಈ ಚಿಕಿತ್ಸೆಗೆ ಸುಮಾರು 5ಲಕ್ಷಕ್ಕೂ ಅಧಿಕ ಮೊತ್ತ ವೆಚ್ಚವಾಗಿರುತ್ತದೆ. ಕುಟುಂಬದ ಆರ್ಥಿಕ ಪರಿಸ್ಥಿತಿ ಅತಿ ದುರ್ಬಲವಾಗಿತ್ತು. ಇದನ್ನು ಅರಿತ ಪರಸ್ಪರ ಸೇವಾ ಬ್ರಿಗೇಡ್ ಸಂಸ್ಥೆಯು ಸುಮಾರು 1,10,032 ರೂಪಾಯಿಯನ್ನು ಊರಿನ ಪ್ರಮುಖರು ದಾನಿಗಳೊಂದಿಗೆ ಹಸ್ತಾಂತರಿಸಲಾಯಿತು.