ಮಡಂತ್ಯಾರು: ಜೆಸಿಐ ಭಾರತ ವಲಯ 15ರ ವ್ಯವಹಾರ ವಿಭಾಗದ “ಮೃದಂಗ” ಸಾಧಕ ಜೇಸಿಗಳ ಸಾಧನೆಯ ತರಂಗ, ವ್ಯವಹಾರ ಸಮ್ಮೇಳನ ಜೆಸಿಐ ಮಡಂತ್ಯಾರು ಆತಿಥ್ಯದಲ್ಲಿ ಸೇಕ್ರೆಡ್ ಹಾರ್ಟ್ ಚರ್ಚ್ ಸಭಾಂಗಣ, ಮಡಂತ್ಯಾರಿನಲ್ಲಿ ಜು. 27ರಂದು ವ್ಯವಹಾರ ವಿಭಾಗದ ನಿರ್ದೇಶಕ HGF ಅಶೋಕ್ ಗುಂಡಿಯಲ್ಕೆ ಅವರ ಅಧ್ಯಕ್ಷತೆಯಲ್ಲಿ ವಿಜೃಂಭಣೆಯಿಂದ ನಡೆಯಿತು.
ವಲಯ ಅಧ್ಯಕ್ಷ JCI Sen. ಅಭಿಲಾಷ್ ಬಿ.ಎ. ಕಾರ್ಯಕ್ರಮವನ್ನು ದೀಪ ಪ್ರಜ್ವಲನದ ಮೂಲಕ ಉದ್ಘಾಟಿಸಿ, ಇಂತಹ ವ್ಯವಹಾರ ಸಮ್ಮೇಳನಗಳ ಮುಖ್ಯ ರೂವಾರಿ ಜೆಸಿ ಸೆಂಟರ್ ಸಂಪತ್ ಬಿ. ಸುವರ್ಣ ಎಂಬ ಮಾತನ್ನು ಹೇಳಿ, ಕಾರ್ಯಕ್ರಮಕ್ಕೆ ಶುಭಹಾರೈಸಿದರು.
ಸಭಾಧ್ಯಕ್ಷ HGF ಅಶೋಕ್ ಗುಂಡಿಯಲ್ಕೆ ಮಾತನಾಡಿ ಕಾರ್ಯಕ್ರಮದ ಬಗ್ಗೆ ವಿವರಿಸಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಪೂರ್ವ ರಾಷ್ಟ್ರೀಯ ನಿರ್ದೇಶಕ JCI Sen ಸಂಪತ್ ಬಿ ಸುವರ್ಣ ಅವರ ಸಾಧನೆಯನ್ನು ಜೇಸಿ R.K. ಬಂಟ್ವಾಳ್ ಪರಿಚಯಿಸುವುದರೊಂದಿಗೆ ಗೌರವಿಸಿ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಇಂತಹ ವ್ಯವಹಾರ ಸಮ್ಮೇಳನಗಳು ಪ್ರತಿ ವರ್ಷವೂ ನಡೆದು ಸಮಾಜದ ತೆರೆಮರೆಯ ಸಾಧಕರನ್ನು ಸಮಾಜಕ್ಕೆ ಪರಿಚಯಿಸಿ, ಅವರನ್ನು ಗುರುತಿಸುವಂತಹ ಕೆಲಸಗಳು ಮುಂದೆಯೂ ನಡೆಯುವಂತಾಗಲೆಂದು ಶುಭವನ್ನು ಹಾರೈಸಿದರು.
ಊರಿನ ವ್ಯವಹಾರ ಕ್ಷೇತ್ರದ ಸಾಧಕ ಯೋಗೀಶ್ ಪೂಜಾರಿ ಕಡ್ತಿಲ ಅವರಿಗೆ “ವ್ಯವಹಾರ ರತ್ನ” ಮತ್ತು ಪ್ರಶಾಂತ್ ಶೆಟ್ಟಿ ಮುಡಾಯೂರು ಅವರಿಗೆ “ಮೃದಂಗ ವ್ಯವಹಾರ ಸಮ್ಮೇಳನ ಪುರಸ್ಕಾರವನ್ನು” ಗಣ್ಯರ ಸಮ್ಮುಖದಲ್ಲಿ ನೀಡಿ ಗೌರವಿಸಲಾಯಿತು.
ವ್ಯವಹಾರ ಸಂಬಂಧಿ ವಿಷಯಗಳ ಕುರಿತಾಗಿ ಸಂಪನ್ಮೂಲ ವ್ಯಕ್ತಿಗಳಿಂದ “ಪವರ್ ಟಾಕ್” ನಡೆಯಿತು. ಸ್ಥಳೀಯ ಡಾನ್ಸ್ ತಂಡಗಳಿಂದ ನೃತ್ಯ ಕಾರ್ಯಕ್ರಮ, JCOM Table C2C ಸಭೆಯೂ ನಡೆಯಿತು.
ವಲಯದ ಮೂರು ಕಂದಾಯ ಜಿಲ್ಲೆಗಳನ್ನೊಳಗೊಂಡ ವಲಯ 15ರ 42 ಘಟಕಗಳಿಂದ ತಲಾ ಒಬ್ಬರಂತೆ ಆಯ್ಕೆಯಾದ 42 ಮಂದಿಗೆ ಸಾಧಕರಿಗೆ ಸಾಧನಾಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಜೊತೆಗೆ ವ್ಯವಹಾರ ವಿಭಾಗದಿಂದ ನಡೆಸಲ್ಪಟ್ಟ ಹಲವಾರು ಕಾರ್ಯಕ್ರಮಗಳಿಗಾಗಿ ಘಟಕ ಮನ್ನಣೆ ಪ್ರಶಸ್ತಿಯನ್ನು ನೀಡಲಾಯಿತು.
ಕಾರ್ಯಕ್ರಮದಲ್ಲಿ ವಲಯ ಉಪಾಧ್ಯಕ್ಷರುಗಳಾದ ಜೇಸಿ ರಂಜಿತ್ ಎಚ್. ಡಿ. ಕಾರ್ಯಕ್ರಮದ ರಾಯಬಾರಿ, ವಲಯ ಉಪಾಧ್ಯಕ್ಷ ಜೆಸಿ ಸಂತೋಷ್ ಶೆಟ್ಟಿ, ವಲಯ ಕಾರ್ಯದರ್ಶಿ ಜೆಸಿ ರವಿಚಂದ್ರ ಪಾಟಲಿ, ಉಪಾಧ್ಯಕ್ಷರಾದ ಜೆಸಿ ಸುಹಾಸ್ ಮರಿಕ್ಕೆ, ಜೆಸಿ ಪ್ರಶಾಂತ್ ಕುಮಾರ್, ಜೆಸಿ ಅನ್ವೇಶ್ ಶೆಟ್ಟಿ ಹಾಗೂ ಎಲ್ಲ ವಿಭಾಗಗಳ ವಲಯ ಅಧಿಕಾರಿ ಮಿತ್ರರು ಉಪಸ್ಥಿತರಿದ್ದರು.
ಪೂರ್ವಾಧ್ಯಕ್ಷರಾದ JC ತುಳಸಿದಾಸ್ ಪೈ ಮತ್ತು ಮಹಿಳಾ ಸಂಯೋಜಕಿ JFM ಸಾಯಿಸುಮ ನಾವಡ ಅತಿಥಿಗಳನ್ನು ವೇದಿಕೆಗೆ ಆಹ್ವಾನಿಸಿ, ಕಾರ್ಯದರ್ಶಿ HGF ಆದರ್ಶ ಹಟ್ಟತ್ತೊಡಿ ಜೆಸಿವಾಣಿ ವಾಚಿಸಿ, ಜೆಸಿಐ ಮಡಂತ್ಯಾರಿನ ಅಧ್ಯಕ್ಷೆ HGF ಅಮಿತ ಅಶೋಕ್ ಸ್ವಾಗತಿಸಿದರು. JC ಯತೀಶ್ ರೈ ಸಭಾಧ್ಯಕ್ಷರ ಪರಿಚಯ, ಸಂಜೆಯ ಸಮಾರೋಪ ಕಾರ್ಯಕ್ರಮ ಸಂಯೋಜಕ HGF ಅಜಯ್ ಜೆ. ಶೆಟ್ಟಿಯವರ ಧನ್ಯವಾದ ಸಮರ್ಪಣೆಯೊಂದಿಗೆ ಮುಕ್ತಾಯವಾಯಿತು.