Site icon Suddi Belthangady

ಚಾರ್ಮಾಡಿ: ಸಾರ್ವಜನಿಕ ಹಿಂದೂ ರುದ್ರಭೂಮಿ ಅಭಿವೃದ್ಧಿ ಸಮಿತಿಯ ನೂತನ ಸಮಿತಿ ರಚನೆ

ಚಾರ್ಮಾಡಿ: ಜು.28ರಂದು ಚಾರ್ಮಾಡಿ ಗ್ರಾಮದ ಸಾರ್ವಜನಿಕ ಹಿಂದೂ ರುದ್ರಭೂಮಿ ಅಭಿವೃದ್ಧಿ ಸಮಿತಿಯ ನೂತನ ಸಮಿತಿಯನ್ನು ರಚಿಸಲಾಯಿತು. ನೂತನ ಸಮಿತಿಯ ಗೌರವ ಅಧ್ಯಕ್ಷರಾಗಿ ಪ್ರಕಾಶ್ ನಾರಾಯಣ ರಾವ್ ಮಠತಮಜಲು, ಅಧ್ಯಕ್ಷ ಶ್ರೀನಿವಾಸ್ ಕುಲಾಲ್, ಕಾರ್ಯದರ್ಶಿಯಾಗಿ ಗಣೇಶ್ ಕೋಟ್ಯಾನ್, ಕೋಶಾಧಿಕಾರಿಯಾಗಿ ಯಶೋಧರ ಪೂಜಾರಿ ವಲಸರಿ ಮತ್ತು ಸದಸ್ಯರಾಗಿ ಸದಾಶಿವ, ಕೆ. ರಾಜೇಶ್ ಬಂಗ್ಲೆಗುಡ್ಡೆ, ಯೋಗೀಶ್ ಗೌಡ ಅಂತರ, ಗೋಪಾಲ ಕೃಷ್ಣ ಕೆರೆಕೋಡಿ, ರಾಮಣ್ಣ ಭಂಡಾರಿ, ದಿವಿನ್ ಮೈಕಾನ್, ಕಿರಣ್ ವಲಸರಿ, ಜಯಕುಮಾರ್ ದೇವಿನಗರ, ಸುಖೇಶ್ ಶೆಟ್ಟಿ, ರವಿ ಪೂಜಾರಿ ಗುತ್ತಿಗೆ, ಕೇಶವತಿ ಭೀಮಂಡೆ, ಭವಾನಿ ವಲಸರಿ ಆಯ್ಕೆಯಾದರು.

ಸಭೆಯಲ್ಲಿ ಚಾರ್ಮಾಡಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪುರುಷೋತ್ತಮ್, ಪಂಚಾಯತ್ ಅಧ್ಯಕ್ಷೆ ಶಾರದ, ಮತ್ತೂರು ಪಂಚಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪ್ರಕಾಶ್ ಹೊಸಮಠ, ಕೊರಗಪ್ಪ ಗೌಡ, ಕೃಷ್ಣ ರಾವ್ ಚಾರ್ಮಾಡಿ ಹಾಗೂ ಪ್ರಮುಖರು ಉಪಸ್ಥಿತರಿದ್ದರು. ಗೋಪಾಲ ಕೃಷ್ಣ ಸ್ವಾಗತಿಸಿದರು. ಗಣೇಶ್ ಕೋಟ್ಯಾನ್ ವಂದಿಸಿದರು.

Exit mobile version