Site icon Suddi Belthangady

ಶವಗಳನ್ನು ಹೂತಿಟ್ಟ ಪ್ರಕರಣ: 8 ಸ್ಥಳ ಗುರುತಿಸಿದ ಎಸ್‌ಐಟಿ ಅಧಿಕಾರಿಗಳು: ನಾಳೆಯಿಂದಲೇ ಅಗೆಯುವ ಕಾರ್ಯ: ಎಸಿ ಅಥವಾ ತಹಶೀಲ್ದಾ‌ರ್ ನೇತೃತ್ವ:SUDDI NEWS EXCLUSIVE ಮಾಹಿತಿ

ಧರ್ಮಸ್ಥಳ: ಧರ್ಮಸ್ಥಳದಲ್ಲಿ ಶವಗಳನ್ನು ಹೂತಿಟ್ಟಿದ್ದೇನೆ ಎಂದು ದಾಖಲಾದ ಪ್ರಕರಣದಲ್ಲಿ ಎಸ್‌ಐಟಿ ತನಿಖಾಧಿಕಾರಿಗಳು ಮತ್ತೆ ಸ್ಥಳ ಮಹಜರು ಕಾರ್ಯ ಮುಂದುವರಿಸಿದ್ದು, ಇದುವರೆಗೆ ಒಟ್ಟು 8 ಸ್ಥಳಗಳನ್ನು ಗುರುತು ಮಾಡಿದ್ದಾರೆ ಎಂದು ವಿಶ್ವಸನೀಯ ಮೂಲಗಳಿಂದ ಸುದ್ದಿ ಬಿಡುಗಡೆಗೆ ತಿಳಿದುಬಂದಿದೆ.

ಮಧ್ಯಾಹ್ನದ ತನಕದ ಮಹಜರು ಕಾರ್ಯದಲ್ಲಿ ಸಾಕ್ಷಿ ದೂರುದಾರ ತೋರಿಸಿದ 8 ಸ್ಥಳಗಳನ್ನು ಗುರುತು ಮಾಡಲಾಗಿದೆ ಎಂದು ಗೊತ್ತಾಗಿದೆ.

ಸ್ಥಳ ಗುರುತು ಮಾಡಿದ ಜಾಗದಲ್ಲಿ ನಾಳೆಯಿಂದಲೇ ಬುರುಡೆ ಹುಡುಕುವ ಕೆಲಸವೂ ಆರಂಭವಾಗಲಿದೆ. ಎಸಿ (ಅಸಿಸ್ಟೆಂಟ್ ಕಮಿಷನರ್ ಅಥವಾ ತಹಶೀಲ್ದಾ‌ರ್ ನೇತೃತ್ವದಲ್ಲಿ ಆಗೆಯುವ ಕಾರ್ಯ ನಡೆಯಲಿದೆ ಎಂಬ ಬಗ್ಗೆ ಸುದ್ದಿ ಬಿಡುಗಡೆಗೆ ಎಕ್ಸ್‌ಕ್ಯೂಸಿವ್ ಮಾಹಿತಿ ಲಭ್ಯವಾಗಿದೆ.

ಸಾಕ್ಷಿ ದೂರುದಾರ ಮತ್ತಾ ತನಿಖಾಧಿಕಾರಿಗಳು ಧರ್ಮಸ್ಥಳ ಪೊಲೀಸ್ ಠಾಣೆಗೆ ತೆರಳಿ ಮಧ್ಯಾಹ್ನದ ಭೋಜನ ಮುಗಿಸಿ ಈಗ ಮತ್ತೆ ಸ್ಥಳ ಮಹಜರು ಕಾರ್ಯರ ತೆರಳಿದ್ದಾರೆ. ನೇತ್ರಾವತಿ ಸ್ನಾನಘಟ್ಟದ ಅರಣ್ಯ ಪ್ರದೇಶದಲ್ಲಿ ಈ ಕೆಲಸ ನಡೆಯುತ್ತಿದೆ.

Exit mobile version