Site icon Suddi Belthangady

ಮಡಂತ್ಯಾರು: ಸೆಕ್ರೆಡ್ ಹಾರ್ಟ್ ಚರ್ಚ್ ನಲ್ಲಿ ಹಿರಿಯರ ದಿನ

ಮಡಂತ್ಯಾರು: ಸೇಕ್ರೆಡ್ ಹಾರ್ಟ್ ಚರ್ಚಿನಲ್ಲಿ ಅಜ್ಜ- ಅಜ್ಜಿಯಂದಿರ/ಹಿರಿಯ ನಾಗರಿಕರ ಜುಬಿಲಿ ಮಹೋತ್ಸವ ಜು. 27ರಂದು ಜರಗಿತ್ತು. ಫಾ| ಲ್ಯಾರಿ ಪಿಂಟೊ ನೇತೃತ್ವದಲ್ಲಿ ಬಲಿಪೂಜೆ ನಡೆಯಿತು. ಬಳಿಕ ಅಭಿನಂದನಾ ಕಾರ್ಯಕ್ರಮ ನಡೆಯಿತು. ಹಿರಿಯ ವ್ಯಕ್ತಿ ರಫಾಯಲ್ ಡಿಸೋಜಾ (90) ದೀಪ ಬೆಳಗಿಸಿ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದರು. ಅಧ್ಯಕ್ಷ ಸ್ಥಾನ ವಹಿಸಿದ ಚರ್ಚಿನ ಧರ್ಮ ಗುರು ಸ್ವಾಮಿ ಡಾ| ಸ್ಟ್ಯಾನಿ ಗೋವಿಯಸ್ ಮಾತನಾಡಿ ವಿಶ್ವಾಸ, ವಿಧೇಯತೆ ನಮಗೆಲ್ಲಾ ಪ್ರೇರಣೆಯಾಗುತ್ತದೆ ನೀವು ನಮಗೆಲ್ಲ ಮಾದರಿ, ನಿಮ್ಮ ಸೇವೆಯನ್ನು ಕೊಂಡಾಡುವಂಥದ್ದು ಎಂದು ಹೇಳಿದರು.

ಸಂಪನ್ಮೂಲ ವ್ಯಕ್ತಿ ಲಿಯೊ ನೊರನ್ಹಾ ಅಜ್ಜ- ಅಜ್ಜಿಯಂದಿರನ್ನು ಉದ್ದೇಶಿಸಿ ಜೀವನದಲ್ಲಿ ವಿಶ್ವಾಸ ಇಟ್ಟು ಸಂತೋಷದಿಂದ ಬಾಳಬೇಕು, ಆರೋಗ್ಯದ ಕಡೆ ಗಮನವಿರಬೇಕೆಂದರು. ಚರ್ಚ್ ಪಾಲನಾ ಪರಿಷತ್ತಿನ ಉಪಾಧ್ಯಕ್ಷ ಜೆರಾಲ್ಡ್ ಮೊರಸ್ ಸಭೀಕರನ್ನು ಉದ್ದೇಶಿಸಿ ನಾಲ್ಕು ಮಾತ್ರೆಗಳನ್ನು ದಿನನಿತ್ಯ ಸ್ವೀಕರಿಸಲು ಕರೆ ನೀಡಿದರು. ಅವುಗಳೆಂದರೆ ಕುಶಲೊಪಾಯವಾಗಿರುವುದು, ಪ್ರಾರ್ಥನೆ, ದೇವರಿಗೆ ಸ್ತುತಿ ಮಾಡುವುದು ಹಾಗೂ ಸೇವೆ. ಸ್ತ್ರೀ ಸಂಘಟನೆಯ ಸದಸ್ಯರು ಪ್ರಾರ್ಥನಾ ಗೀತೆ ಹಾಡಿದರು. ಕ್ಯಾಥೋಲಿಕ್ ಸಭೆಯಿಂದ ಅಭಿನಂದನಾ ಗೀತೆ ಪ್ರಸ್ತುತಪಡಿಸಲಾಯಿತು ಹಾಗೂ ವೈ. ಸಿ. ಎಸ್ ನ ಸದಸ್ಯರು ಮನೋರಂಜನೆ ಪ್ರಹಸನದ ಮೂಲಕ ನೀಡಿದರು.

ಬಂದ ಪ್ರತಿ ಹಿರಿಯ ವ್ಯಕ್ತಿಗಳಿಗೆ ನೆನಪಿನ ಕಾಣಿಕೆಯನ್ನು ನೀಡಿ ಗೌರವಿಸಲಾಯಿತು. ವೇದಿಕೆಯಲ್ಲಿ ಚರ್ಚಿನ ಧರ್ಮಗುರು ಸ್ವಾಮಿ ಡಾ| ಸ್ಟ್ಯಾನಿ ಗೋವಿಯಸ್ ಉದ್ಘಾಟಕ ರಫಾಯಲ್ ಡಿಸೋಜಾ, ಸಹಾಯಕ ಧರ್ಮಗುರು ಫಾ| ಲ್ಯಾರಿ ಪಿಂಟೊ, ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ್ಯೊಪಾಧ್ಯಾಯ ಫಾ| ದೀಪಕ್ ಡೇಸಾ, ಸಂಪನ್ಮೂಲ ವ್ಯಕ್ತಿ ಲಿಯೋ ನೊರನ್ಹಾ, ಚರ್ಚ್ ಪಾಲನ ಪರಿಷದ್ ಉಪಾಧ್ಯಕ್ಷ ಜೆರಾಲ್ಡ್ ಮೊರಸ್, ಕಾರ್ಯದರ್ಶಿ ನೆಲ್ಸನ್ ಲಸ್ರಾದೋ, 21 ಆಯೋಗಗಳ ಸಂಯೋಜಕ ರಿಚಾರ್ಡ್ ಮೊರಾಸ್, ಯೆಕ್ತರ್ ಪಂಗಡ ಆಯೋಗದ ಸಂಚಾಲಕ ಲಿಯೊ ರೋಡ್ರಿಗಸ್, ಕಾರ್ಯದರ್ಶಿ ಫಿಲಿಪ್ ಡಿಕುನ್ಹಾ, ಕ್ಯಾಥೋಲಿಕ್ ಸಭೆಯ ಅಧ್ಯಕ್ಷ ವಿನ್ಸೆಂಟ್ ಡಿಸೋಜಾ, ಸ್ತ್ರೀ ಸಂಘಟನೆಯ ಅಧ್ಯಕ್ಷೆ ಸೆಲೆಸ್ತಿನ್ ಡಿಸೋಜಾ ವೈ. ಸಿ. ಎಸ್. ಸಂಘದ ಅಧ್ಯಕ್ಷೆ ವಿಸ್ಮಿತ ಡಿಸೋಜಾ ಹಾಜರಿದ್ದರು.

ಈ ಕಾರ್ಯಕ್ರಮದಲ್ಲಿ 450 ಮಂದಿ ಹಿರಿಯ ನಾಗರಿಕರು ಭಾಗವಹಿಸಿದ್ದರು. ದಾನಿಗಳನ್ನು ಶಾಲು ಹೊದಿಸಿ ಗೌರವಿಸಲಾಯಿತು. ವಿನ್ಸ್ಸೆಂಟ್ ಮೊರಾಸ್ ಕಾರ್ಯಕ್ರಮ ನಿರೂಪಿಸಿದರು.

Exit mobile version