ಮುಂಡಾಜೆ: ದೇಶದ ಏಕೈಕ “ಕಾರ್ಗಿಲ್ ವನ” ಮುಂಡಾಜೆಯಲ್ಲಿ ಬೆಳ್ತಂಗಡಿ ಮಾಜಿ ಸೈನಿಕರ ಸಂಘದ ಜೊತೆ ಕದಂಬ ಹಾಗೂ ಇನ್ನಿತರ ಗಿಡಗಳನ್ನು ನೆಟ್ಟು ಜು.27ರಂದು ವಿಜಯೋತ್ಸವ ಆಚರಿಸಲಾಯಿತು.
ಮಾಜಿ ಸೈನಿಕ ಸಂಘದ ಗೌರವ ಅಧ್ಯಕ್ಷ, ಮೆಜರ್ ಜನರಲ್ ಎಂ.ವಿ. ಭಟ್, ಶ್ರೀಕಾಂತ್ ಗೊರೆ, ಸುನಿಲ್ ಶೆಣೈ, ಜಗನ್ನಾಥ್ ಇನ್ನಿತರ ಸದಸ್ಯರು ಉಪಸ್ಥಿತರಿದ್ದು ಸಮಾರಂಭ ನಡೆಯಿತು.
ಮೇಜರ್ ಜನರಲ್ ಎಮ್.ವಿ.ಭಟ್ ಯುದ್ಧದ ವೇಳೆ ಭಾರತ ಮಾತೆಯ ಸೈನಿಕರ ಬಲಿದಾನ ವನ್ನು ಸ್ಮರಿಸಲಾಯಿತು. ಹಾಗೂ ಒಂದು ನಿಮಿಷದ ಮೌನ ಪ್ರಾರ್ಥನೆ ಮಾಡಲಾಯಿತು.
ಕುಟುಂಬ ವರ್ಗ ಹಾಗೂ ಸಿ.ಎ ಬ್ಯಾಂಕ್ ಮುಂಡಾಜೆ ನಿರ್ದೇಶಕಿ ಸುಮಾ ಎಂ. ಗೋಖಲೆ, ಕೃಷಿಕರಾದ ವಿದ್ಯಾ ಬೆಂಡೆ, ಶಿವಣ್ಣ, ಅಶೋಕ್, ಸುನಿಲ್, ಅನಂತ ಇನ್ನಿತರರು, ಪತ್ರಿಕಾ ವಿತರಕ ಭಾಲಚಂದ್ರ ನಾಯಕ್ ಉಪಸ್ಥಿತರಿದ್ದರು.
ಅರಣ್ಯ ಮಿತ್ರ ಪ್ರಶಸ್ತಿ ವಿಜೇತ, ಕಾರ್ಗಿಲ್ ವನದ ರೂವಾರಿ ಸಚಿನ್ ಜಿ. ಭಿಡೆ ಎಲ್ಲರನ್ನು ಸ್ವಾಗತಿಸಿದರು. ಲತಾ ಜಿ. ಭಿಡೆ ಧನ್ಯವಾದ ಸಮರ್ಪಿಸಿದರು.