ಬೆಳ್ತಂಗಡಿ: ಧರ್ಮಸ್ಥಳದಲ್ಲಿ ಹೆಣ ಹೂತಿಟ್ಟಿದ್ದೇನೆಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಜು.28ರಂದು ಎಸ್.ಐ.ಟಿಯಿಂದ ಮಹತ್ವದ ಕಾರ್ಯ ನಡೆಯಲಿದೆ. ಬೆಳ್ತಂಗಡಿಯ ಎಸ್.ಐ.ಟಿ ಕಚೇರಿ ಎದುರು ಬಿಗಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿದ್ದು, ಎಸ್.ಐ.ಟಿ ಕಚೇರಿಯಲ್ಲಿ ಈಗಾಗಲೇ ಎಸ್.ಐ.ಟಿ ಅಧಿಕಾರಿಗಳು ಕಂದಾಯ, ಭೂ ದಾಖಲೆ ವಿಭಾಗದ ಅಧಿಕಾರಿ ವರ್ಗದ ಜೊತೆ ಸಭೆ ನಡೆಸುತ್ತಿದ್ದಾರೆ. ಸಭೆಯ ಬಳಿಕ ಮಹಜರು ಕಾರ್ಯ ನಡೆಯುವ ಸಾಧ್ಯತೆಯಿದೆ. ಎಸ್.ಐ.ಟಿ ಕಚೇರಿ ಬಳಿ ಮೂರು ಡಿಎಆರ್ ತುಕಡಿಗಳು ನಿಯೋಜಿಸಲಾಗಿದೆ.
ಧರ್ಮಸ್ಥಳದಲ್ಲಿ ಶವ ಹೂತಿದ್ದೇನೆಂದ ವ್ಯಕ್ತಿಯ ಕೇಸ್ -ಬೆಳ್ತಂಗಡಿಯ ಎಸ್.ಐ.ಟಿ ಕಚೇರಿಯಲ್ಲಿ ಮೀಟಿಂಗ್-ಕಂದಾಯ, ಅರಣ್ಯ ಇಲಾಖೆ ಅಧಿಕಾರಿಗಳ ಜೊತೆ ಎಸ್.ಐ.ಟಿ ಅಧಿಕಾರಿಗಳ ಮೀಟಿಂಗ್
