ಬೆಳ್ತಂಗಡಿ: ಧರ್ಮಸ್ಥಳದಲ್ಲಿ ಹೆಣ ಹೂತಿಟ್ಟಿದ್ದೇನೆಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಜು.28ರಂದು ಎಸ್.ಐ. =ಟಿಯಿಂದ ಮಹತ್ವದ ಕಾರ್ಯ ನಡೆಯಲಿದೆ. ಬೆಳ್ತಂಗಡಿಯ ಎಸ್.ಐ.ಟಿ ಕಚೇರಿ ಎದುರು ಬಿಗಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿದ್ದು, ಎಸ್.ಐ.ಟಿ ಕಚೇರಿ ಬಳಿ ಆಗಮಿಸಿದ ಕಂದಾಯ, ಭೂ ದಾಖಲೆ ವಿಭಾಗದ ಅಧಿಕಾರಿವರ್ಗ, ಸಿಬ್ಬಂದಿ ಆಗಮಿಸಿದ್ದಾರೆ. ಎಸ್ಐಟಿ ಕಚೇರಿ ಬಳಿ ನಿಂತಿರೋ ಮೂರು ಡಿಎಆರ್ ತುಕಡಿಗಳು ನಿಯೋಜಿಸಲಾಗಿದೆ. ಇಂದು ಅನಾಮಿಕ ದೂರುದಾರನನ್ನು ಸಮಾಧಿ ಸ್ಥಳಕ್ಕೆ ಕರೆದುಕೊಂಡು ಹೋಗುವ ಸಾಧ್ಯತೆಯಿದೆ.
ಧರ್ಮಸ್ಥಳ: ಶವ ಹೂತ ಕೇಸ್ -ಇಂದು ಮಹತ್ವದ ಪ್ರಕ್ರಿಯೆ ಸಾಧ್ಯತೆ-ಎಸ್.ಐ. ಟಿ ಕಚೇರಿಗೆ ಕಂದಾಯ,ಅರಣ್ಯ ಇಲಾಖೆ ಅಧಿಕಾರಿಗಳ ಆಗಮನ-ಬಿಗಿ ಭದ್ರತೆ
