Site icon Suddi Belthangady

ಉರುವಾಲು: ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಕೊರಿಂಜದಲ್ಲಿ ಕುಣಿತ ಭಜನಾ ಕಾರ್ಯಕ್ರಮ-ಧರ್ಮವನ್ನು ಉಳಿಸಿ ಬೆಳೆಸಲು ಭಜನೆಯಿಂದ ಸಾಧ್ಯ: ಸೇಸಪ್ಪ ರೈ ಕೊರಿಂಜ

ಕೊರಿಂಜ: ಉರುವಾಲು ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಕೊರಿಂಜದಲ್ಲಿ ಕುಣಿತಾ ಭಜನಾ ಕಾರ್ಯಕ್ರಮವು ಜು.27ರಂದು ನಡೆಯಿತು.

ಶ್ರೀ ಕ್ಷೇತ್ರದ ಸಹ ಆಡಳಿತ ಮೊಕ್ತೇಸರ ಸೇಸಪ್ಪ ರೈ ಕೊರಿಂಜ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ
ನಮ್ಮ ದೇವಸ್ಥಾನದಲ್ಲಿ ಕುಣಿತ ಭಜನಾ ಉದ್ಘಾಟನೆ ಆಗಿರುವುದರಿಂದ ಇಂದು ಒಳ್ಳೆಯ ಪೂರಕ ವಾತಾವರಣ ನಿರ್ಮಾಣವಾಗಿದೆ. ಭಜನೆಯಿಂದ ವಿಭಜನೆ ಇಲ್ಲ ಎಂಬ‌ ನುಡಿಯಂತೆ ಪ್ರತಿಯೊಬ್ಬರು ಕೂಡ ನಮ್ಮ ಧರ್ಮವನ್ನು ಉಳಿಸಿ ಬೆಳೆಸಲು ಭಜನೆಯಿಂದ ಸಾಧ್ಯವಿದೆ ಎಂದು ಹೇಳಿದರು.

ಕುಣಿತ ಭಜನಾ ತರಬೇತಿಯ ಗುರುಗಳಾದ ನಾಗೇಶ ಬಿ‌. ನೆರಿಯ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಇಂದಿನ ಯುಗದಲ್ಲಿ ಭಜನೆಯು ನಮ್ಮ ಸಂಸ್ಕೃತಿ, ಸಂಸ್ಕಾರ ಮತ್ತು ಧರ್ಮ ಇವುಗಳನ್ನು ಉಳಿಸಿ ಬೆಳೆಸುವ ಕಾರ್ಯವನ್ನು ಮಾಡುತ್ತಿದೆ. ತಾವೆಲ್ಲರೂ ಪ್ರತಿದಿನ ಮನೆಗಳಲ್ಲಿ ಭಜನೆಯನ್ನು ಮಾಡಬೇಕೆಂದು ತಿಳಿಸಿದರು.

ವೇದಿಕೆಯಲ್ಲಿ ಭಜನಾ ತರಬೇತುದಾರ ಅಭಿಷೇಕ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿವೃತ್ತ ಮೇಲ್ವಿಚಾರಕಿ ವಾರಿಜ ವಿ. ಶೆಟ್ಟಿ, ಉಪಸ್ಥಿತರಿದ್ದರು.

ಸತ್ಯನಾರಾಯಣ ಭಜನಾ ಮಂಡಳಿ ಸದಸ್ಯ ಗಣೇಶ ಗೌಡ ಬನಾರಿ‌ ಹಾಗೂ ಶ್ರೀ ವಿಘ್ನೇಶ್ವರ ಭಜನಾ ಮಂಡಳಿ ಸದಸ್ಯ ಪ್ರದೀಪ್ ನಾಯ್ಕ ಸಹಕರಿಸಿದರು.

ಚಿಣ್ಣರ‌ ಬಳಗ ಭಜನಾ ತಂಡದ ಸದಸ್ಯ ಜ್ಞಾನೇಶ್ ಆಳ್ವ ಪ್ರಾರ್ಥಿಸಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಉರುವಾಲು ವಿಭಾಗದ ಸೇವಾ ಪ್ರತಿನಿಧಿ ಸೀತಾರಾಮ ಆಳ್ವ ಕಾರ್ಯಕ್ರಮದ ನಿರೂಪಣೆ ಹಾಗೂ ವಂದನಾರ್ಪಣೆಯನ್ನು ಮಾಡಿದರು.

Exit mobile version