ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಕೊಲೆ, ಅತ್ಯಾಚಾರ ನಡೆದ ಶವಗಳನ್ನು ಹೂತಿದ್ದೇನೆಂದು ಹೇಳಿರುವ ಸಾಕ್ಷಿ ದೂರುದಾರ ಜು.26ರಂದು ಹೇಳಿಕೆ ನೀಡಿದ ನಂತರ ಇಂದು (ಜುಲೈ27) ಮಂಗಳೂರಿನಲ್ಲಿ ಎಸ್.ಐ.ಟಿ ಮುಖ್ಯಸ್ಥ ಪ್ರಣವ್ ಮೊಹಾಂತಿ, ಡಿಐಜಿ ಅನುಚೇತ್ ಮತ್ತು ಇತರ ಅಧಿಕಾರಿಗಳ ಮುಂದೆ ಬೆಳಗ್ಗೆ ಹಾಜರಾಗಿದ್ದು ನಿರಂತರ ಎಂಟು ಗಂಟೆಗಳ ಕಾಲ ತನ್ನ ಹೇಳಿಕೆಯನ್ನು ನೀಡಿದ್ದಾರೆ. ತನ್ನಲ್ಲಿರುವ ಪಿನ್ ಟು ಪಿನ್ ಮಾಹಿತಿಯನ್ನು ಎಸ್. ಐ. ಟಿ ಮುಂದೆ ನೀಡಿರುವ ಮುಸುಕುಧಾರಿ ಸಾಕ್ಷಿ ದೂರುದಾರ ಹೇಳಿಕೆ ನೀಡಿದ ನಂತರ ತನ್ನ ವಕೀಲರೊಂದಿಗೆ ನಿಗೂಢ ಸ್ಥಳಕ್ಕೆ ತೆರಳಿದ್ದಾರೆ.
ಧರ್ಮಸ್ಥಳ ಹೆಣ ಹೂತಿಟ್ಟೆನೆಂದ ವ್ಯಕ್ತಿಯ ಪ್ರಕರಣ-ಎಸ್.ಐ.ಟಿ ಅಧಿಕಾರಿಗಳ ಮುಂದೆ ಎರಡನೇ ದಿನವೂ 8ಗಂಟೆಕಾಲ ಹೇಳಿಕೆ ನೀಡಿದ ಸಾಕ್ಷಿದೂರುದಾರ-ವಕೀಲರೊಂದಿಗೆ ನಿಗೂಢ ಸ್ಥಳಕ್ಕೆ ವಾಪಾಸ್
