ಶಿಶಿಲ: ಗ್ರಾಮದ ಗುಡ್ಡೆತೋಟ ಹೊನ್ನಪ್ಪರವರ ಮನೆಯ ಸಿಮೆಂಟ್ ಶೀಟ್ ಛಾವಣಿಯು ಜು. 26ರಂದು ಸಂಜೆಯ ಭೀಕರ ಗಾಳಿಗೆ ಹಾರಿ ಹೋಗಿದ್ದು ಶೌರ್ಯ ವಿಪತ್ತು ತಂಡದ ಸ್ವಯಂಸೇವಕ ರಾಧಾಕೃಷ್ಣ ಅವರಿಗೆ ಕರೆ ಬಂದ ಮೇರೆಗೆ ತಂಡದ ಇತರ ಸದಸ್ಯರಾದ ರಮೇಶ್ ಭೈರಕಟ್ಟ, ಅವಿನಾಶ್ ಭಿಡೆ
ಕಿರಣ್ ಶಿಶಿಲ, ರಾಧಾಕೃಷ್ಣ ಶಿಶಿಲ, ಕುಶಾಲಪ್ಪ ಗೌಡ ಶಿಶಿಲ ಅವರು ತುರ್ತಾಗಿ ಸ್ಪಂದಿಸಿ ಸಿಮೆಂಟ್ ಶೀಟ್ ಗಳನ್ನು ಅಳವಡಿಸಿ ಮನೆಯವರಿಗೆ ಸಾಂತ್ವನ ನೀಡಿದರು.
ಶಿಶಿಲ: ಭೀಕರ ಗಾಳಿ ಮಳೆಗೆ ಮನೆ ಮೇಲ್ಚಾವಣಿ ಹಾನಿ:ತಕ್ಷಣ ಸ್ಪಂದಿಸಿದ ಶೌರ್ಯ ವಿಪತ್ತು ತಂಡದ ಸದಸ್ಯರು
