ಕೊಕ್ಕಡ: ಜೋರಾದ ಗಾಳಿ ಮಳೆಗೆ ಕಡಿತಗೊಂಡ ವಿದ್ಯುತ್ ಸಂಪರ್ಕ 10 ಗಂಟೆಯಾದರೂ ದುರಸ್ತಿಗೊಳ್ಳದೆ ಗ್ರಾಮದ ಜನತೆ ಸಂಪೂರ್ಣ ಕತ್ತಲೆಯಲ್ಲಿ ಕಳೆಯಬೇಕಾದ ಸ್ಥಿತಿ ತಾಲೂಕಿನ ಪಟ್ರಮೆ ಕೊಕ್ಕಡದಲ್ಲಿ ನಡೆಯಿತು.
ಜು. 26 ರ ಬೆಳಿಗ್ಗೆ 11:30ರ ಸುಮಾರಿಗೆ ಸುರಿದ ಗಾಳಿ ಮಳೆಗೆ ಕಡಿತಗೊಂಡ ವಿದ್ಯುತ್ ಸಂಪರ್ಕ ರಾತ್ರಿಯಾದರು ಸರಿಯಾಗಲೇ ಇಲ್ಲ. ಈ ಬಗ್ಗೆ ಮೆಸ್ಕಾಂ ಅಧಿಕಾರಿಗಳನ್ನು ಪ್ರಶ್ನಿಸಿದರೆ ಅವರಲ್ಲಿ ಸರಿಯಾದ ಮಾಹಿತಿ ಇದ್ದಂತೆ ಇಲ್ಲ.
ನಾಲ್ಕೈದು ಕಡೆ ಕಂಬ ಬಿದ್ದಿದೆ ಎನ್ನುವುದು ಬಿಟ್ಟರೆ ಎಲ್ಲಿ ಬಿದ್ದಿದೆ, ಯಾವ ವ್ಯಾಪ್ತಿಯಲ್ಲಿ ಬಿದ್ದಿದೆ ಎನ್ನುವ ಸ್ಪಷ್ಟ ಮಾಹಿತಿಯು ಅಧಿಕಾರಿಗಳಲ್ಲಿ ಇಲ್ಲ. ಕಳೆದೆರಡು ವರ್ಷಗಳಿಂದ ಯಾವುದೇ ಅಡಚಣೆಯಿಲ್ಲದೆ ಗ್ರಾಮದಲ್ಲಿ ವಿದ್ಯುತ್ ಸಂಪರ್ಕವಿರುತ್ತಿದ್ದು ಇದೇ ಮೊದಲ ಬಾರಿಗೆ ಒಂದೇ ಮಳೆಗೆ ಗ್ರಾಮದ ಜನತೆ ಕತ್ತಲೆಯಲ್ಲಿ ಕಳೆಯುವಂತಾಯಿತು.