ಮಚ್ಚಿನ: ಮೂಲ್ಯರೆ ಯಾನೆ ಕುಂಬಾರರ ಯುವ ವೇದಿಕೆ ಮಡಂತ್ಯಾರ್ ವಲಯದಿಂದ ಬಳ್ಳಮಂಜದಲ್ಲಿ ಆ. 10ರಂದು ನಡೆಯಲಿರುವ ವಲಯ ಮಟ್ಟದ ಆಟಿಡೊಂಜಿ ದಿನ ಕೆಸರ್ದ ಗೊಬ್ಬು ಕ್ರೀಡಾಕೂಟದ ಆಮಂತ್ರಣ ಪತ್ರಿಕೆಯನ್ನು ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನದಲ್ಲಿ ದೇವರಿಗೆ ಸಮರ್ಪಿಸಿ ಬಿಡುಗಡೆಗೊಳಿಸಲಾಯಿತು.
ವಲಯ ಕ್ರೀಡಾಕೂಟ ಸಮಿತಿಯ ಅಧ್ಯಕ್ಷ ವಿಜಯ ಮಡಕ್ಕಿಲ, ಕಾರ್ಯದರ್ಶಿ ಸವಿತ ನಾಗೇಶ್, ಕೋಶಾಧಿಕಾರಿ ಚಿದಾನಂದ ಪಿ., ಬಳ್ಳಮಂಜ ವಲಯ ಸಮಿತಿಯ ಅಧ್ಯಕ್ಷ ಸಚಿನ್ ಬಿ. ಬಳ್ಳಮಂಜ, ಕಾರ್ಯದರ್ಶಿ ಸುಕೇಶ್ ಸಾಲುಮರ, ಕೋಶಾಧಿಕಾರಿ ರಕ್ಷಿತ್ ಮಾಣುರು, ಗ್ರಾಮ ಪಂಚಾಯತ್ ಸದಸ್ಯ ರವಿಚಂದ್ರ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ವಸಂತಿ ಲಕ್ಷ್ಮಣ್, ಹರ್ಷ ಬಳ್ಳಮಂಜ, ದಿನೇಶ್ ಎಮ್. ರಾಜೇಶ್ ಕೊಡೈಲು ಹಾಗೂ ಪದಾಧಿಕಾರಿಗಳು, ಸರ್ವ ಸದಸ್ಯರು ಉಪಸ್ಥಿತರಿದ್ದರು.
ವರದಿ: ✍️ಹರ್ಷ ಬಳ್ಳಮಂಜ