ಗುರುವಾಯನಕೆರೆ: ಕಾರ್ಗಿಲ್ ವಿಜಯ ದಿವಸ್ ಪ್ರಯುಕ್ತ ಬೆಳ್ತಂಗಡಿ ಬಿಜೆಪಿ ಯುವ ಮೋರ್ಚಾದಿಂದ ಕಾರ್ಗಿಲ್ ಯುದ್ಧದಲ್ಲಿ ಹೋರಾಡಿ ವೀರ ಯೋಧ ಪದಕ ಪಡೆದ ನಾಡಿನ ಹೆಮ್ಮೆಯ ಸೇನಾನಿ ಏಕನಾಥ್ ಶೆಟ್ಟಿ ಸ್ವಗ್ರಹ ಗುರುದಾಮದಲ್ಲಿ ಅವರ ಪುತ್ಥಳಿಗೆ ಪುಷ್ಪ ಮಾಲೆ ಹಾಕುವುದರ ಮೂಲಕ ಗೌರವಾರ್ಪಣೆ ಸಲ್ಲಿಸಿದರು.
ಯೋಧ ಏಕನಾಥ್ ಶೆಟ್ಟಿ ಅವರ ಪತ್ನಿ ಜಯಂತಿ ಶೆಟ್ಟಿ, ಮಗ ಅಕ್ಷಯ್ ಶೆಟ್ಟಿ ಸೇರಿದಂತೆ ಬೆಳ್ತಂಗಡಿ ಮಂಡಲ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಶಶಿರಾಜ್ ಶೆಟ್ಟಿ ಗುರುವಾಯನಕೆರೆ, ಜಿಲ್ಲಾ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಉಮೇಶ್ ಕುಲಾಲ್, ಮಂಡಲ ಯುವಮೋರ್ಚಾ ಉಪಾಧ್ಯಕ್ಷ ಗಣೇಶ್ ಆರ್. ಲಾಯಿಲ, ಹರೀಶ್ ಗೌಡ ಸಂಭೋಲ್ಯ ಗೇರುಕಟ್ಟೆ, ಕಾರ್ಯದರ್ಶಿ ಗಿರೀಶ್ ಗೌಡ ಬಿ.ಕೆ. ಬಂದಾರು, ಸದಸ್ಯರಾದ ಪ್ರಸಾದ್ ಸುದೆಮುಗೇರು, ಜಗದೀಶ್ ಕನ್ನಾಜೆ ಲಾಯಿಲ, ಕಣಿಯೂರು ಮಹಾಶಕ್ತಿ ಕೇಂದ್ರ ಯುವಮೋರ್ಚಾ ಸಹ ಸಂಚಾಲಕ ಲೋಕ್ಷತ್ ಗೌಡ ಬೈಪಾಡಿ ಅವರುಗಳು ಉಪಸ್ಥಿತರಿದ್ದರು.