ಬೆಳ್ತಂಗಡಿ: ಟೈಲರ್ಸ್ ಸಹಕಾರ ಸಂಘದ 2024-25ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆ ಜು.26ರಂದು ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ ಸಂಘದ ಅಧ್ಯಕ್ಷ ವಲೇರಿಯನ್ ರೊಡ್ರಿಗಸ್‌ರವರ ಅಧ್ಯಕ್ಷತೆಯಲ್ಲಿ ನಡೆಯಿತು.
2016ರಲ್ಲಿ ಪ್ರಾರಂಭಗೊಂಡ ಸಹಕಾರಿಯು 4 ಲಕ್ಷ ಪಾಲು ಬಂಡವಾಳ, 200 ಸದಸ್ಯರನ್ನು ಹೊಂದಿದ್ದ ಸಂಘ ಇದೀಗ 1372 ಸದಸ್ಯರನ್ನು ಹೊಂದಿ 14.58 ಲಕ್ಷ ಪಾಲು ಬಂಡವಾಳ ದೊಂದಿಗೆ 19.56 ಕೋಟಿ ಠೇವಣಿ ಸಂಗ್ರಹಿಸಿ ಆರ್ಥಿಕ ವರ್ಷದಲ್ಲಿ ಸಂಘ ಒಟ್ಟು ರೂ. 57 ಕೋಟಿಯಷ್ಟು ವ್ಯವಹಾರ ನಡೆಸಿ ರೂ.16.90ಲಕ್ಷ ನಿವ್ವಳ ಲಾಭಗಳಿಸಿ ಸದಸ್ಯರಿಗೆ ಶೇ 15% ಡಿವಿಡೆಂಡ್ ಘೋಷಣೆ ಮಾಡಿದರು.
ಕಾರ್ಯನಿರ್ವಣಾಧಿಕಾರಿ ರೋಲ್ಸನ್ ಜೋಯಲ್ ಮೊರಾಸ್ ವಾರ್ಷಿಕ ವರದಿ, ಲೆಕ್ಕ ಪತ್ರ ಮಂಡಿಸಿದರು. ಸಂಘದಲ್ಲಿ ಪಿಗ್ಮಿ ಸಂಗ್ರಾಹಕ ಫ್ರಾನ್ಸಿಸ್ ಮೊರಾಸ್, ಹರೀಶ್ ಹೆಗ್ಡೆ, ಸುಮತಿ, ವೆಂಕಪ್ಪ ಪೂಜಾರಿ ಇವರಿಗೆ ಪ್ರೋತ್ಸಾಹಧನ ವಿತರಿಸಲಾಯತು.
ಸಂಘದ ಉಪಾಧ್ಯಕ್ಷ ಕೆ.ಕುಶಾಲಪ್ಪ ಗೌಡ, ನಿರ್ದೇಶಕರುಗಳಾದ ಎನ್.ವಸಂತ್, ಸದಾನಂದ ಶೆಟ್ಟಿ, ವಲೇರಿಯನ್ ಪಾಯಿಸ್, ವಸಂತ ಪೂಜಾರಿ, ರಾಜು ಪೂಜಾರಿ, ಜೋಸೆಫ್ ಡಿ’ಸೋಜ, ಶಾಂಭವಿ ಪಿ ಬಂಗೇರ, ಶಶಿಕಲಾ ಗೋಪಾಲ್, ಪಾರ್ವತಿ ಎ. ಮತ್ತು ಉಷಾ ಉಪಸ್ಥಿತರಿದ್ದರು. ಉಪಾಧ್ಯಕ್ಷ ಕೆ.ಕುಶಾಲಪ್ಪ ಗೌಡ ಸ್ವಾಗತಿಸಿ, ನಿರ್ದೇಶಕ ರಾಜು ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.ಸದಸ್ಯೆ ಪ್ರೇಮ ಪ್ರಾರ್ಥಿಸಿದರು. ಸಿಬ್ಬಂದಿಗಳಾದ, ನಿಶಾ ಶೆಟ್ಟಿ ಹರ್ಷಿತಾ ಬಿ. ಎನ್. ಸಹಕರಿಸಿದರು. ನಿರ್ದೇಶಕಿ ಪಾರ್ವತಿ ಎ. ವಂದಿಸಿದರು.