Site icon Suddi Belthangady

ಕೊಕ್ಕಡದಲ್ಲಿ ಉಚಿತ ಕ್ಯಾನ್ಸರ್ ತಪಾಸಣಾ ಶಿಬಿರ

ಕೊಕ್ಕಡ: ಮಂಗಳೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಮುದಾಯ ಆರೋಗ್ಯ ಕೇಂದ್ರ ಕೊಕ್ಕಡ ಹಾಗೂ ಗ್ರಾಮ ಪಂಚಾಯತ್ ಕೊಕ್ಕಡ, ಎಜೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಕುಂಟಿಕಾನ ಮಂಗಳೂರು, ಇಂಡಿಯನ್ ಕ್ಯಾನ್ಸರ್ ಸೊಸೈಟಿ ಮಂಗಳೂರು ಹಾಗೂ ಇಂಡಿಯನ್ ಡೆಂಟಲ್ ಅಸೋಸಿಯೇಶನ್ ಪುತ್ತೂರು ಶಾಖೆ ಸಹಯೋಗದಲ್ಲಿ ಜು. 25ರಂದು ಉಚಿತ ಕ್ಯಾನ್ಸರ್ ತಪಾಸಣಾ ಶಿಬಿರ ಸಮುದಾಯ ಆರೋಗ್ಯ ಕೇಂದ್ರ ಕೊಕ್ಕಡದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ತುಷಾರ ವಹಿಸಿದರು. ಕಾರ್ಯಕ್ರಮಕ್ಕೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಬೇಬಿ ದೀಪ ಬೆಳಗಿಸಿ ಚಾಲನೆ ನೀಡಿದರು.

ಪುತ್ತೂರು ಇಂಡಿಯನ್ ಡೆಂಟಲ್ ಅಸೋಸಿಯೇಷನ್ ಕನ್ವೀನಿಯರ್ ಡಾ.ದೀಪಾಲಿ ಡೋಂಗ್ರೆ ಬಾಯಿಯ ಕ್ಯಾನ್ಸರ್ ಬಗ್ಗೆ ಮಾಹಿತಿ ನೀಡಿದ್ದರು. ರಾಜೇಶ್ ಶೆಟ್ಟಿ ಸ್ತನ ಹಾಗೂ ಸರ್ವಿಕಲ್ ಕ್ಯಾನ್ಸರ್ ಬಗ್ಗೆ ಅರಿವು ಮೂಡಿಸಿ, ಸಾರ್ವಜನಿಕರಿಗೆ ಕ್ಯಾನ್ಸರ್ ತಡೆ ಮತ್ತು ಮುಂಚಿತ ಪತ್ತೆಯ ಮಹತ್ವದ ಬಗ್ಗೆ ಮಾಹಿತಿ ನೀಡಲಾಯಿತು.

ಶಿಬಿರದಲ್ಲಿ ಬಾಯಿ, ಸ್ತನ, ಗರ್ಭಾಶಯ ಹಾಗೂ ಚರ್ಮ ಕ್ಯಾನ್ಸರ್‌ಗಳಿಗೆ ಸ್ಕ್ರೀನಿಂಗ್ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಹಿರಿಯ ವೈದ್ಯಾಧಿಕಾರಿ ಡಾ.ಪ್ರಕಾಶ್, ಆಯುಷ್ ವೈದ್ಯಾಧಿಕಾರಿ ಡಾ. ಚೈತ್ರ, ಬೆಳ್ತಂಗಡಿ ತಾಲೂಕು ಆಸ್ಪತ್ರೆಯ ಡಾ.ಹೇಮಲತಾ, ಪಿ.ಡಿ.ಒ ದೀಪಕ್ ರಾಜ್, ಎ ಜೆ ಆಸ್ಪತ್ರೆಯ ರೇಡಿಯೋ ಆಂಕೋಲಜಿಸ್ಟ್ ಡಾ.ಅಂಜಲಿ, ಡಾ.ನಿರೀಕ್ಷಾ, ಡಾ.ಆರತಿ, ಮತ್ತು ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಅಭಿಜಿತ್ ಉಪಸ್ಥಿತರಿದ್ದರು.

ಒಟ್ಟು 121 ಜನರು ಶಿಬಿರದ ತಪಾಸಣೆಯ ಸದುಪಯೋಗ ಪಡೆದರು. ಆರೋಗ್ಯ ಕೇಂದ್ರದ ಸಿಬ್ಬಂದಿಗಳು ಶಿಬಿರದಲ್ಲಿ ಸಹಕರಿಸಿದರು. ವಿನುತ ಕಾರ್ಯಕ್ರಮ ನಿರೂಪಿಸಿದರು.

Exit mobile version