Site icon Suddi Belthangady

ವೀರ ಯೋಧ ಏಕನಾಥ ಶೆಟ್ಟಿಯವರ ನಿವಾಸದಲ್ಲಿ ಕಾರ್ಗಿಲ್ ವಿಜಯ ದಿನಾಚರಣೆ

ಗುರುವಾಯನಕೆರೆ: ಜು. 26ರಂದು ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ವತಿಯಿಂದ ಗುರುವಾಯನಕೆರೆ ನಮ್ಮ ಮನೆ ಶಾಖೆ ಮತ್ತು ಪಾಂಡುರಂಗ ಶಾಖೆಯ ಯೋಗ ಬಂಧುಗಳು ಯೋಧ ಏಕನಾಥ ಶೆಟ್ಟಿಯವರ ನಿವಾಸದಲ್ಲಿ ಕಾರ್ಗಿಲ್ ವಿಜಯ ದಿವಸವನ್ನು ಆಚರಿಸಿದರು.

ಭಾರತಮಾತೆಗೆ ಹಣತೆಯಲ್ಲಿ ದೀಪ ಹಚ್ಚಿ ಪುಷ್ಪನಮನ ಸಲ್ಲಿಸುವುದರೊಂದಿಗೆ ವೀರಯೋಧ ಏಕನಾಥ ಶೆಟ್ಟಿಯವರ ಪ್ರತಿಮೆಗೆ ಗೌರವಪೂರ್ವಕ ಮಾಲಾರ್ಪಣೆ ಮಾಡಿದರು.ಸಮಿತಿಯ ಯೋಗಬಂಧು ನಿವೃತ ಯೋಧ ಮೇಜರ್ ಸುಬೇದಾರ್ ಶಿವಕುಮಾರ್ ಅವರನ್ನು ಸಮಿತಿಯ ಶಾಖೆಯಿಂದ ಗೌರವಿಸಲಾಯಿತು. ಯೋಗಬಂಧು ಸಂತೋಷ್ ಕಾಪಿನಡ್ಕ ಕಾರ್ಗಿಲ್ ದಿನಾಚರಣೆಯ ಮಹತ್ವದೊಂದಿಗೆ ಭಾರತಮಾತೆಯ ರಕ್ಷಣೆಗೆ ಪ್ರಾಣ ತೆತ್ತ ವೀರಾಗ್ರಣಿ ಸೈನಿಕರ ಸಾಹಸಗಾಥೆಗಳನ್ನು ಕುರಿತು ಮಾತನಾಡುವುದರೊಂದಿಗೆ ಮುಂದಿನ ಯುವಪೀಳಿಗೆ ಇಂತಹ ಸೈನಿಕರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎನ್ನುವ ಸಂದೇಶದೊಂದಿಗೆ ಬೌದ್ಧಿಕ್ ನಡೆಸಿಕೊಟ್ಟರು.

ಯೋಗ ಬಂಧುಗಳಾದ ಜಯಂತಿ ಶೆಟ್ಟಿ,ವಿದ್ಯಾನಾಯಕ್ ಕಾರ್ಗಿಲ್ ದಿನಾಚರಣೆ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಸುಮಲತಾ ಸನ್ಮಾನಿತ ಯೋಧರನ್ನು ಪರಿಚಯಿಸಿದರು. ರಾಮಚಂದ್ರ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಸತ್ಯಶಂಕರ ಧನ್ಯವಾದವಿತ್ತರು.

Exit mobile version