ನಿಡ್ಲೆ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ 2024-25ನೇ ವಾರ್ಷಿಕ ಮಹಾಸಭೆ ಸಂಘದ ಆವರಣದಲ್ಲಿ ಜು. 26ರಂದು ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಸಂಘದ ಅಧ್ಯಕ್ಷ ಧನಂಜಯ ಗೌಡ ನೆರವೇರಿಸಿ, ವಾರ್ಷಿಕ ವರದಿಯನ್ನು ಮಂಡಿಸಿ ಸಂಘವು ಪ್ರಸ್ತುತ ಸಾಲಿನಲ್ಲಿ 59ಲಕ್ಷದ 78000ಕ್ಕೂ ಹೆಚ್ಚು ಲಾಭ ಕಂಡಿದ್ದು ಸದಸ್ಯರಿಗೆ 7%ಲಾಭoಶ ನೀಡುವುದಾಗಿ ತಿಳಿಸಿದರು.
ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಡೀಕಯ್ಯ ಎಂ.ಕೆ., ನಿರ್ದೇಶಕರಾದ ವಿಜಯ್ ಕುಮಾರ್ ಎಚ್., ಆನಂದ ಗೌಡ ಎಂ., ಕೆ. ರಮೇಶ್ ರಾವ್ ಕಾಯಡ, ಹೇಮಂತ್ ಗೌಡ, ಜಯರಾಮ ಪಾಳಂದೈ, ಗಾಯತ್ರಿ ಹೆಚ್. ಗೌಡ, ವಿಜಯಲಕ್ಷ್ಮೀ ಕೆ., ರಾಜು, ಮೋಹನ್ ಪೂಜಾರಿ ಬಿ. ಹಾಗೂ ಧನಂಜಯ ಬಂಡೇರಿ ಉಪಸ್ಥಿತರಿದ್ದರು.
ಸಂಘದ ಲೆಕ್ಕಿಗ ವೇಣುಗೋಪಾಲ್ ಲೆಕ್ಕ ಪರಿಶೋಧನಾ ವರದಿಯನ್ನು ಮಂಡಿಸಿದರು. ಸಂಘದ ನಿರ್ದೇಶಕಿ ಗಾಯತ್ರಿ
ಪ್ರಾರ್ಥಿಸಿದರು. ನಿರ್ದೇಶಕ ರಮೇಶ್ ರಾವ್ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪದ್ಮನಾಭ ಪಿ. ನಿರೂಪಿಸಿದರು.