ಬೆಳ್ತಂಗಡಿ: ತಾಲೂಕು ತಣ್ಣೀರುಪಂತ ಗ್ರಾಮದ ರುದ್ರಗಿರಿ ಎಂಬಲ್ಲಿ ಅಸ್ವಸ್ವರಾಗಿ ಬಿದ್ದುಕೊಂಡಿದ್ದ ಅಪರಿಚಿತ ವ್ಯಕ್ತಿ ಹನುಮಂತಪ್ಪ(65 ವ) ಅವರನ್ನು ಚಿಕಿತ್ಸೆಗಾಗಿ 108 ಅಂಬ್ಯುಲೆನ್ಸ್ ನಲ್ಲಿ, ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಮೃತ ವ್ಯಕ್ತಿಯ ವಾರೀಸುದಾರರ ಪತ್ತೆಗಾಗಿ ಪುಂಜಾಲಕಟ್ಟೆ ಪೊಲೀಸ್ ಠಾಣೆಗೆ ಸಂಪರ್ಕಿಸಬೇಕಾಗಿ ಕೋರಲಾಗಿದೆ.
ತಣ್ಣೀರುಪಂತ: ಅಪರಿಚಿತ ಶವ ಪತ್ತೆ
