Site icon Suddi Belthangady

ಉಜಿರೆ: ಎಸ್.ಡಿ.ಎಮ್ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ವಿಶೇಷ ಉಪನ್ಯಾಸ

ಉಜಿರೆ: ಎಸ್. ಡಿ. ಎಮ್. ಪಾಲಿಟಿಕ್ನಿಕ್ ಕಾಲೇಜಿನಲ್ಲಿ ಡಿಪ್ಲೋಮಾ ಅಂತಿಮ ವರ್ಷದ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಇಂಜಿನಿಯರಿಂಗ್ ಮತ್ತು ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ವಿಶೇಷ ಉಪನ್ಯಾಸ ಕಾರ್ಯಕ್ರಮವು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.

ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಸುರತ್ಕಲ್ ಎನ್. ಐ. ಟಿ. ಕೆ ಸೀಮನ್ಸ್ ಶ್ರೇಷ್ಟತಾ ಕೇಂದ್ರದ ತರಬೇತದಾರೆ ಬಸವಶ್ರೀ ಪಾಟೀಲ್ ಆಧುನಿಕ ಪಿ.ಎಲ್.ಸಿ ನಿಯಂತ್ರಕಗಳೊಂದಿಗಿನ ಸಂವಹನ ಮತ್ತು ಉದ್ಯಮ 4.0 ಮೇಲೆ ಅದರ ಪರಿಣಾಮದ ಕುರಿತಾಗಿ ವಿಶೇಷ ಉಪನ್ಯಾಸವನ್ನು ನೀಡಿ ಮಾಡರ್ನ್ ಪಿ.ಎಲ್.ಸಿ. ಯನ್ನು ಕೈಗಾರಿಕಾ ಯಾಂತ್ರೀಕರಣದಲ್ಲಿ ಹೇಗೆ ಬಳಸಲಾಗುತ್ತದೆ ಮತ್ತು ಅವು ಕೈಗಾರಿಕಾ ಅಭಿವೃದ್ಧಿ 4.0 ಯಲ್ಲಿ ಹೇಗೆ ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂದು ತಿಳಿಸಿಕೊಟ್ಟರು.

ಸಿಮಾನ್ಸ್ ಶ್ರೇಷ್ಠತಾ ಕೇಂದ್ರದ ವಿಘ್ನೇಶ್ ವಿ. ಕಿಣಿ ಸಂವೇದಕಗಳು ಮತ್ತು ಆಕ್ಯೂವೇಟರ್ ಗಳು ಎಂಬ ವಿಷಯದ ಕುರಿತಾಗಿ ಉಪನ್ಯಾಸವನ್ನು ನೀಡಿದರು. ಸಂವೇದಕಗಳು ಮತ್ತು ಆಕ್ಯೂವೇಟರ್ ಗಳ ಮೂಲಗಳು, ಅವುಗಳ ಪ್ರಕಾರಗಳು, ಕಾರ್ಯಗಳು ಮತ್ತು ಆಟೋಮೇಷನ್ ಮತ್ತು ರೋಬೋಟಿಕ್ಸ್ ನಂತಹ ಕ್ಷೇತ್ರಗಳಲ್ಲಿ ನೈಜ ಪ್ರಪಂಚದ ಅನ್ವಯಿಕೆಗಳ ಬಗ್ಗೆ ತಿಳಿಸಿಕೊಟ್ಟರು. ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಇಂಜಿನಿಯರಿಂಗ್ ವಿಭಾಗದ ಉಪನ್ಯಾಸಕ ಅಮರೇಶ್ ಹೆಬ್ಬಾರ್, ಶಾದ್ವಲ ಸೆಬಾಸ್ಟಿಯನ್ ಮತ್ತು ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ಉಪನ್ಯಾಸಕ ಶಿವರಾಜ್ ಪಿ., ಸಾಯಿ ಚರಣ್ ಉಪಸ್ಥಿತರಿದ್ದರು.

Exit mobile version