Site icon Suddi Belthangady

ಸು ಫ್ರಮ್‌ ಸೋ ಸಿನಿಮಾದಲ್ಲಿ ಬೆಳ್ತಂಗಡಿಯ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್‌ನ ಗಣೇಶ್‌ ಹೆಗ್ಡೆ

ಬೆಳ್ತಂಗಡಿ: ಇದೀಗ ಕನ್ನಡ ಚಿತ್ರರಂಗದಲ್ಲಿ ಸಂಚಲನ ಸೃಷ್ಟಿಸಿರುವ ಸು ಫ್ರಮ್ ಸೋ ( ಸುಲೋಚನಾ ಫ್ರಮ್ ಸೋಮೇಶ್ವರ) ಕನ್ನಡ ಚಲನಚಿತ್ರ ದಲ್ಲಿ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್‌ನ ಬೆಳ್ತಂಗಡಿ ವಲಯದ ಸಂಘಟನಾ ಕಾರ್ಯದರ್ಶಿಯಾಗಿರುವ ಗಣೇಶ್ ಹೆಗ್ಡೆ ನಾರಾವಿಯವರು ಸಣ್ಣ ಪಾತ್ರ ಮಾಡುವ ಮೂಲಕ ಮೊದಲ ಬಾರಿಗೆ ಬೆಳ್ಳಿ ಪರದೆಯಲ್ಲಿ ಕಾಣಿಸಿಕೊಂಡಿದ್ದಾರೆ.

ಈ ಸಿನಿಮಾದಲ್ಲಿ ರಾಜ್ ಬಿ. ಶೆಟ್ಟಿ. ಶಶಿಧರ್ ಶೆಟ್ಟಿ ಬರೋಡಾ, ರವಿ ರೈ ಕಳಸ ನಿರ್ಮಾಪಕರಾಗಿ, ಕಥೆ ರಚನೆ ಹಾಗೂ ನಿರ್ದೇಶನವನ್ನು ಜೆ.ಪಿ. ತುಮಿನಾಡು ಮಾಡಿದ್ದಾರೆ. ಈ ಚಿತ್ರದಲ್ಲಿ ಪ್ರಕಾಶ್ ತುಮಿನಾಡು, ದೀಪಕ್ ರೈ ಪಾಣಾಜೆ, ಜೆ ಪಿ ತುಮಿನಾಡು, ಮೈಮ್ ರಾಮದಾಸ್, ಸನಿಲ್ ಗೌತಮ್, ಸಂಧ್ಯಾ ಅರೆಕೆರೆ, ಶಿವಪ್ರಕಾಶ್ ಪೂಂಜಾ. ಮುಂತಾದ ಕಲಾವಿದರು ನಟಿಸಿದ್ದು ಎಲ್ಲಾ ಚಿತ್ರಮಂದಿರದಲ್ಲಿ ಇದುವೇ ಜುಲೈ 25 ನೇ ಶುಕ್ರವಾರದಂದು ಏಕಕಾಲದಲ್ಲಿ ಬಿಡುಗಡೆಗೊಳ್ಳಲಿದೆ.

ಗಣೇಶ್ ಹೆಗ್ಡೆ ನಾರಾವಿಯವರಿಗೆ ಚಿತ್ರರಂಗದಲ್ಲಿ ಇನ್ನು ಮುಂದಕ್ಕೂ ಅಭಿನಯ ಮಾಡುವ ಅವಕಾಶ ಒದಗಿ ಬರಲಿ ಎಂದು ಬೆಳ್ತಂಗಡಿ ವಲಯದ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಶುಭ ಹಾರೈಸಿದ್ದಾರೆ.

Exit mobile version