Site icon Suddi Belthangady

ಉಪ್ಪಾರಪಳಿಕೆ: ಸ.ಹಿ.ಪ್ರಾ. ಶಾಲೆಗೆ ಬೆಳ್ತಂಗಡಿ ಬೆಸ್ಟ್ ಫೌಂಡೇಶನ್ ಮತ್ತು ಸೌತಡ್ಕ ಸೇವಾ ಸಮಿತಿಯಿಂದ ಪುಸ್ತಕ ವಿತರಣೆ

ಕೊಕ್ಕಡ: ಗ್ರಾಮದ ಉಪ್ಪಾರಪಳಿಕೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಬೆಸ್ಟ್ ಫೌಂಡೇಶನ್ ಮತ್ತು ಸೌತಡ್ಕ ಸೇವಾ ಸಮಿತಿಯಿಂದ ಶಾಲಾ ಮಕ್ಕಳಿಗೆ ಬರೆಯುವ ಪುಸ್ತಕವನ್ನು ಬೆಸ್ಟ್ ಫೌಂಡೇಶನ್ ನ ಅಧ್ಯಕ್ಷ ರಕ್ಷಿತ್ ಶಿವರಾಂ ವಿತರಣೆ ಮಾಡಿದರು. ಸೌತಡ್ಕ ಮಹಾಗಣಪತಿ ಕ್ಷೇತ್ರದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಸುಬ್ರಹ್ಮಣ್ಯ ಶಬರಾಯ, ಸದಸ್ಯರಾದ ಪ್ರಶಾಂತ್ ಮಚ್ಚಿನ, ಗಣೇಶ್ ಕಾಶಿ, ಹರಿಶ್ಚಂದ್ರ, ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗೇಶ್ ಕುಮಾರ್ ಗೌಡ, ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ಹಕೀಂ ಕೊಕ್ಕಡ, ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ಜಯಪ್ರಕಾಶ್ ಬಾಳ್ತಿಲ್ಲಾಯ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರು, ಮಕ್ಕಳ ಪೋಷಕರು, ಮುಖ್ಯೋಪಾಧ್ಯಾಯರು, ಶಿಕ್ಷಕರು ಹಾಗೂ ಪ್ರಮುಖರಾದ ಅರುಣ್ ಲೋಬೊ, ನವೀನ ಗೌಡ, ಆಸಿಫ್ ಐಡಿಯಲ್, ನಿತಿನ್ ಕಡಿರ, ಬಿ.ಎಂ. ಜಗದೀಶ್, ಗಣೇಶ್ ಪಿ.ಕೆ., ಕಲಂದರ್ ಕೊಕ್ಕಡ ಉಪಸ್ಥಿತರಿದ್ದರು.

Exit mobile version