Site icon Suddi Belthangady

ಪುದುವೆಟ್ಟು: ಹಿಂದೂ ರುದ್ರಭೂಮಿಗೆ ಸಿಲಿಕಾನ್ ಚೇಂಬರ್ ಅಳವಡಿಸಲು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಸಹಾಯಧನ

ಧರ್ಮಸ್ಥಳ: ಪುದುವೆಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಿಂದೂ ರುದ್ರ ಭೂಮಿಯನ್ನು ನಿರ್ಮಿಸಿದ್ದು, ಸಿಲಿಕಾನ್ ಚೇಂಬರ್ ಅಳವಡಿಸಲು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ, 1,51630 ಮೊತ್ತದ ಸಹಾಯಧನದ ಮಂಜೂರಾತಿ ಪತ್ರವನ್ನು ತಾಲೂಕು ಯೋಜನಾಧಿಕಾರಿ ಯಶೋಧರ ಕೆ. ಅವರು ರುದ್ರಭೂಮಿ ಸಮಿತಿಯ ಅಧ್ಯಕ್ಷ ಬೊಮ್ಮಣ್ಣ ಗೌಡ ಹಾಗೂ ಪದಾಧಿಕಾರಿಗಳಿಗೆ ಜು.22ರಂದು ವಿತರಿಸಿದರು.

ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವಿಬಸಪ್ಪ ಗೌಡ, ಪುದುವೆಟ್ಟು ಗ್ರಾಮ ಪಂಚಾಯಿತ್ ಅಧ್ಯಕ್ಷ ಪೂರ್ಣಾಕ್ಷ ಬಿ., ಜನಜಾಗೃತಿ ಗ್ರಾಮ ಸಮಿತಿಯ ಅಧ್ಯಕ್ಷ ದೇವನಗೌಡ ಬೊಲ್ಮಾನರು, ರುದ್ರಭೂಮಿ ಸಮಿತಿಯ ಪದಾಧಿಕಾರಿಗಳಾದ ಸಜೀವ್ ಹಾಗೂ ಚಿತ್ತರಂಜನ್ ಜೈನ್, ಪುದುವೆಟ್ಟು ಒಕ್ಕೂಟದ ಅಧ್ಯಕ್ಷ ಶಶಿಧರ ಮಿಯ್ಯಾರು ಒಕ್ಕೂಟದ ಅಧ್ಯಕ್ಷ ಅಪೂರ್ವ ಜೈನ್, ಕೆಮ್ಮಟೆ ಒಕ್ಕೂಟದ ಅಧ್ಯಕ್ಷ ಗಣೇಶ್ ಸಾಲಿಯಾನ್ ಹಾಗೂ ಪದಾಧಿಕಾರಿಗಳು, ಪುದುವೆಟ್ಟು ಶೌರ್ಯ ಘಟಕದ ಸ್ವಯಂಸೇವಕರು, ಅಶೋಕ್ ಟ್ರೇಡರ್ಸ್ ಮಾಲಕ ಅಶೋಕ್, ವಲಯ ಮೇಲ್ವಿಚಾರಕ ರವೀಂದ್ರ ಬಿ., ಸೇವಾ ಪ್ರತಿನಿಧಿಗಳಾದ ಆನಂದ್ ಹಾಗು ಚೈತ್ರ ಅವರು ಉಪಸ್ಥಿತರಿದ್ದರು.

Exit mobile version