Site icon Suddi Belthangady

ಬಿಜೆಪಿಗರೇ ಸರ್ಕಾರದ ವಿರುದ್ಧ ಸುಳ್ಳು ಆರೋಪ ನಿಲ್ಲಿಸಿ: ತಾಲೂಕಿಗೆ ನೀಡಿದ ಅಭಿವೃದ್ಧಿ, ಯೋಜನೆ ಗಮನಿಸಿ-ಅಭಿವೃದ್ಧಿ ಅನುದಾನಗಳ ಪಟ್ಟಿಗಳೊಂದಿಗೆ ಯುವ ಕಾಂಗ್ರೆಸ್ ಬೆಳ್ತಂಗಡಿಯಿಂದ ಪೋಸ್ಟರ್ ಅಭಿಯಾನ

ಬೆಳ್ತಂಗಡಿ: ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಬಂದ ನಂತರ, ಗ್ಯಾರಂಟಿ ಯೋಜನೆಗಳನ್ನು ಜನತೆಗೆ ಯಶಸ್ವಿಯಾಗಿ ನೀಡಿ, ಅಭಿವೃದ್ಧಿ ಮತ್ತು ಯೋಜನೆಗಳಿಗೆ ಅನುದಾನಗಳು ನೀಡುತ್ತಿದ್ದು, ಆದರೆ ವಿರೋಧ ಪಕ್ಷ ಬಿಜೆಪಿ ಸುಳ್ಳು ಮತ್ತು ವ್ಯರ್ಥ ಆರೋಪವನ್ನು ಮಾಡುತ್ತಿದ್ದು ಸರ್ಕಾರ ಅಭಿವೃದ್ಧಿಗೆ ಅನುದಾನವನ್ನು ನೀಡುತ್ತಿಲ್ಲ ಎಂದು ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಬಂದ ನಂತರ ತಾಲೂಕಿಗೆ ನೀಡಿರುವ ಅಭಿವೃದ್ಧಿ ಯೋಜನೆಗಳ, ಅನುದಾನಗಳ ಪಟ್ಟಿಗಳೊಂದಿಗೆ ಜು. 30ರಂದು ಯುವ ಕಾಂಗ್ರೆಸ್ ಬೆಳ್ತಂಗಡಿಯಿಂದ ಪೋಸ್ಟರ್ ಅಭಿಯಾನವನ್ನು ನಡೆಸಲಿದ್ದಾರೆ.

ಪೋಸ್ಟರ್ ಅಭಿಯಾನದ, ಬಿತ್ತಿ ಪತ್ರವನ್ನು ಜು.22ರಂದು ಬಿಡುಗಡೆಗೊಳಿಸಲಾಯಿತು. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಇಬ್ರಾಹಿಂ ನವಾಜ್, ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ಹಕೀಂ ಕೊಕ್ಕಡ, ರಾಜ್ಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಅಭಿನಂದನ್ ಹರೀಶ್ ಕುಮಾರ್, ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ನಿತೇಶ್, ಯುವ ಕಾಂಗ್ರೆಸ್ ಗ್ರಾಮೀಣ ಸಮಿತಿಯ ಅಧ್ಯಕ್ಷ ಅಝರ್ ನಾವೂರು, ಯುವ ಕಾಂಗ್ರೆಸ್ ಉಪಾಧ್ಯಕ್ಷ ಅರುಣ್ ಲೋಬೊ, ನವೀನ್ ಗೌಡ ಸವಣಾಲು, ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಮೆಲಂತಬೆಟ್ಟು, ಯುವ ಕಾಂಗ್ರೆಸ್ ಪದಾಧಿಕಾರಿಗಳಾದ ಮಹಮದ್ ಸಿದ್ದಿಕ್ ಮೆಲಂತಬೆಟ್ಟು, ಅವಿನಾಶ್ ಮೇಲಂತಬೆಟ್ಟು, ಜಾನ್ಸನ್ ಕೊಕ್ಕಡ, ವಿನಯ್ ಉಜಿರೆ, ಗಣೇಶ್ ಕಣಿಯೂರು ಉಪಸ್ಥಿತರಿದ್ದರು.

Exit mobile version