Site icon Suddi Belthangady

ಪಿಲ್ಯ: ಗುಡ್ ಫ್ಯೂಚರ್ ಚೈಲ್ಡ್ ಆಂಗ್ಲ ಮಾಧ್ಯಮ‌ ಶಾಲೆಯಲ್ಲಿ ಶಿಕ್ಷಕ-ರಕ್ಷಕ ಸಂಘದ ಸಭೆ

ಪಿಲ್ಯ: ಗುಡ್ ಫ್ಯೂಚರ್ ಚೈಲ್ಡ್ ಆಂಗ್ಲ ಮಾಧ್ಯಮ‌ ಶಾಲೆಯ 2025-26ನೇ ಶೈಕ್ಷಣಿಕ ಸಾಲಿನ ಸಭೆಯು ಜು.21ರಂದು ನಡೆಯಿತು. ಫೈಝಾನ್ ಸ್ವಾಗತಿಸಿದರು. ಶಾಲಾ ಮುಖ್ಯೋಪಾಧ್ಯಾಯ ಪ್ರಭಾಕರ್ ಶೆಟ್ಟಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ನೂತನ ಶಿಕ್ಷಕ – ರಕ್ಷಕ ಸಂಘದ ರಚನೆ ಮಾಡಲಾಯಿತು. ಅಧ್ಯಕ್ಷರಾಗಿ ಅಬ್ದುಲ್ ಶುಕುರ್ ಸಾಹೇಬ್ ಅವರು ಆಯ್ಕೆಯಾದರು. ಉಪಾಧ್ಯಕ್ಷರಾಗಿ ಧನಕೀರ್ತಿ ಜೈನ್ ಹಾಗೂ ವಿನಯಾ ಆಯ್ಕೆಯಾದರು. ಸದಸ್ಯರಾಗಿ ರೆಹಮತ್, ಮೊಹಮ್ಮದ್ ಅಶ್ರಫ್, ಯಶೋಧರ್, ಬಿಂದು, ಯಶೋದ, ಸುರೇಖಾ, ಸಬೀನ ಪರ್ವಿನ್, ಗೀತಾ, ಗಿರೀಶ್, ರಮೀಝಾ ಹಾಗೂ ರಾಜೇಶ್ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ಶಾಲಾ ಮುಖ್ಯೋಪಾಧ್ಯಾಯ ಪ್ರಭಾಕರ್ ಶೆಟ್ಟಿ ಅವರು ಆಯ್ಕೆಯಾಗಿದ್ದಾರೆ. ಗೌರವ ಸಲಹೆಗಾರರಾಗಿ ಶಾಜಿ ಕೆ. ಕುರಿಯನ್ ಅವರನ್ನು ಆಯ್ಕೆ ಮಾಡಲಾಯಿತು.

ನೂತನ ಶಿಕ್ಷಕ – ರಕ್ಷಕ ಸಮಿತಿಯ ರಚನೆಯ ಕುರಿತು ಶಾಲಾ ಸಂಚಾಲಕ ನಸೀರ್ ಅಹಮ್ಮದ್ ಖಾನ್ ಅವರು ಶಾಲಾ ಅಭಿವೃದ್ಧಿಯ ಬಗೆಗೆ ಮನದ ಮಾತುಗಳನ್ನಾಡಿದರು. ಪ್ರಾರ್ಥನೆಯನ್ನು ಶ್ರುತನ್ ಜೈನ್, ಅನುಷ್ಕಾ, ಮಹಾನ್, ಅವನೀಶ್ ನೆರವೇರಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಸರ್ವಾಣಿಯವರು ನೆರವೇರಿಸಿದರು. ರಕ್ಷಿತಾ ಧನ್ಯವಾದ ಸಮರ್ಪಿಸಿದರು.

Exit mobile version