ಬೆಳ್ತಂಗಡಿ: ಭಾರತೀಯ ಮಾಜ್ದೂರ್ ಸಂಘದ ನೇತೃತ್ವದಲ್ಲಿ ಭಾರತೀಯ ಮಜ್ದೂರು ಸಂಘ ಬೆಳ್ತಂಗಡಿ ತಾಲೂಕು ಸಮಿತಿಯ ಸಹಭಾಗಿತ್ವದಲ್ಲಿ ಬಿ.ಎಮ್.ಎಸ್.ನ 70ನೇ ವರ್ಷದ ಕಾರ್ಯಕ್ರಮಗಳ ಸಮಾರೋಪ ಸಮಾರಂಭ ದೆಹಲಿಯಲ್ಲಿ ನಡೆಯಲಿದೆ. ಇದರಲ್ಲಿ ರಾಷ್ಟೀಯ ಸ್ವಯಂಸೇವಕ ಸಂಘದ ಸರ ಸಂಘ ಚಾಲಕ ಡಾ. ಮೋಹನ್ ಜೀ ಭಾಗವತ್ ಅವರು ಸಮಾರೋಪ ಭಾಷಣವನ್ನು ಮಾಡಲಿದ್ದಾರೆ. ಇದರ ನೇರಪ್ರಸಾರದ ಕಾರ್ಯಕ್ರಮ ಶ್ರೀ ಮಂಜುನಾಥೇಶ್ವರ ಪಿನಾಕೆ ಸಭಾಭಾವನ ಸಂತೆಕಟ್ಟೆ ಬೆಳ್ತಂಗಡಿಯಲ್ಲಿ ಜು.23ರಂದು ಬೆಳ್ಳಿಗೆ ಸಮಯ 11 ಗಂಟೆಗೆ ನಡೆಯಲಿದೆ. ಇದರ ನೇರ ಪ್ರಸಾರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಸಮಿತಿ ಅಧ್ಯಕ್ಷ ಉದಯ ಬಿ.ಕೆ. ವಹಿಸಲಿದ್ದಾರೆ. ಮುಖ್ಯ ಅತಿಥಿಗಳಿಗಾಗಿ RSS ಇದರ ಪುತ್ತೂರು ಜಿಲ್ಲೆಯ ಜಿಲ್ಲಾ ಸಹ ಬೌದ್ದಿಕ್ ಪ್ರಮುಖರಾದ ಸುಬ್ರಾಯ ಪುಣಚ, ಬಿ.ಎಮ್.ಎಸ್. ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ಯು, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕುಮಾರ್ ನಾಥ್ ಉಜಿರೆ, ಆಟೋ ರಿಕ್ಷಾ ಯೂನಿಯನ್ ಇದರ ತಾಲೂಕು ಸಮಿತಿಯ ಅಧ್ಯಕ್ಷ ಕೃಷ್ಣ ಬೆಳಾಲು, ರಬ್ಬರ್ ಟ್ಯಾಪರ್ ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿ ನಾಗರಾಜ ಪಿ. ವೇದಿಕೆಯಲ್ಲಿ ಉಪಸ್ಥಿತಿಯಿರುವರು. ಕಾರ್ಯಕ್ರಮದಲ್ಲಿ ಬೆಳ್ತಂಗಡಿ ತಾಲೂಕಿನ ಸಮಸ್ತ ಬಿ.ಎಮ್.ಎಸ್. ಸಂಘಟನೆಯ ಕಾರ್ಯಕರ್ತರು, ಕಾರ್ಮಿಕ ಬಂಧುಗಳು, ರಾಷ್ಟ್ರ ಚಿಂತನೆಯ ಸಂಘ ಪರಿವಾರ ಸಂಘಟನೆಯ ಎಲ್ಲಾ ಹಿರಿಯರು, ಪ್ರಮುಖರು ಉಪಸ್ಥಿತಿಯಿರುತ್ತಾರೆ.
ಜು.23: ಬಿ.ಎಮ್.ಎಸ್. 70ನೇ ವರ್ಷದ ಕಾರ್ಯಕ್ರಮಗಳ ಸಮಾರೋಪ ಸಮಾರಂಭ
