Site icon Suddi Belthangady

ಕಳೆಂಜ: ಕ್ರಿಶ್ಚಿಯನ್ ಬ್ರದರ್ಸ್ ರಿಂದ ದೇಜಮ್ಮರಿಗೆ ಚಿಕಿತ್ಸಾ ನೆರವು

ಕಳೆಂಜ: ಕ್ರಿಶ್ಚಿಯನ್ ಬ್ರದರ್ಸ್ ರಿಂದ ಸಂಸ್ಥೆಯ ‘ಕಾರುಣ್ಯ ಸ್ಪರ್ಶ ಯೋಜನೆ’ ಅಡಿಯಲ್ಲಿ, ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ದೇಜಮ್ಮ ಅವರಿಗೆ ಚಿಕಿತ್ಸೆಗಾಗಿ 10,000/- ಸಹಾಯಧನವನ್ನು ನೀಡಲಾಗಿದೆ.

ಈ ಹಣವನ್ನು ಸಂಸ್ಥೆಯ ಅಧ್ಯಕ್ಷ ಅಗಸ್ಟೀನ್ ಟಿ.ಎ., ಗೌರವಾಧ್ಯಕ್ಷ ಸೆಬಾಸ್ಟಿಯನ್ ಪಿ.ಟಿ., ಕಾರ್ಯದರ್ಶಿ ಶಿಜೋ ಜೋಸೆಫ್, ಉಪಾಧ್ಯಕ್ಷ ಮ್ಯಾಥ್ಯೂ ವಿ.ಟಿ. ಹಾಗೂ ಪದಾಧಿಕಾರಿಗಳಾದ ಸೋನಿ ಎಂ.ಕೆ., ತೋಮಸ್ ಕೆ.ಡಿ., ಸಜಿ, ಸುನೋಜ್, ವಿನೋಯಿ ಮತ್ತು ಇತರ ಸದಸ್ಯರು ದೇಜಮ್ಮ ಅವರ ಮಗಳು ಗೀತಾ ಅವರಿಗೆ ಹಸ್ತಾಂತರಿಸಿದರು.

Exit mobile version