Site icon Suddi Belthangady

ಕಾಡು ಪ್ರಾಣಿಗಳ ಹಾವಳಿ: ಸರಕಾರಕ್ಕೆ ರಕ್ಷಿತ್ ಶಿವರಾಂ ಮುಖಾಂತರ ಮನವಿ ಸಲ್ಲಿಕೆ

ಬೆಳ್ತಂಗಡಿ: ಕರ್ನಾಟಕ ಸಿರೋ ಮಲಬಾರ್ ಕತೋಲಿಕ್ ಅಸೋಸಿಯೇಷನ್, ಬೆಳ್ತಂಗಡಿ ಧರ್ಮಪ್ರಾಂತ್ಯ ಇದರ ಆಶ್ರಯದಲ್ಲಿ ಕಾಡು ಪ್ರಾಣಿಗಳ ಹಾವಳಿಯಿಂದ ರಕ್ಷಣೆಗೆ ಕೋರಿ ಜನಾಂದೋಲನ ಪ್ರತಿಭಟನೆ ಜು.21ರಂದು ಬೆಳ್ತಂಗಡಿ ತಾಲೂಕು ಕೇಂದ್ರದಲ್ಲಿ ನಡೆಯಿತು.

ಅಂಬೇಡ್ಕರ್ ಭವನದಿಂದ ಅರಣ್ಯ ಇಲಾಖೆಯ ಕಚೇರಿಯವರೆಗೆ ಜನಾಂದೋಲನ ಜಾಥಾ ನಡೆಯಿತು. ಈ ಬಗ್ಗೆ ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್ ಅವರಿಗೆ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಫಾದರ್ ರಿಜೊ ಒಡಂಬಳ್ಳಿ, ಕರ್ನಾಟಕ ಸೀರೋ ಮಲಬಾರ್ ಕೆಥೋಲಿಕ್ ಅಸೋಸಿಯೇಷನ್ ಕೇಂದ್ರ ಸಮಿತಿ ಅಧ್ಯಕ್ಷ ಬಿಟ್ಟಿ ನೆಡುನಿಲಂ, KSMCA ಪ್ರಧಾನ ಕಾರ್ಯದರ್ಶಿ ಸೆಬಾಸ್ಟಿಯನ್ ಎಂ.ಜೆ. ಮಲಯಾ ಟ್ಟಿಲ್, ಜಾಗತಿಕ ಕೆಥೋಲಿಕ್ ಕಾಂಗ್ರೇಸ್ ನ ಕಾರ್ಯದರ್ಶಿ ಜೈಸನ್ ಪಟ್ಟೆರಿಲ್, ಜಾಗತಿಕ ಯುವ ಘಟಕದ ಸಂಯೋಜಕ ರೋಬಿನ್ ಒಡಂಬಲ್ಲಿ, PRO ಸೆಬಾಸ್ಟಿಯನ್ ಪೊಕ್ಕoತಾಡಿ , ಪೋರೊನಾ ಅಧ್ಯಕ್ಷ ಸೆಬಾಸ್ಟಿಯನ್ ಟೋಮಿ ವೈಪನ ಪಾಲ್ಗೊಂಡಿದ್ದರು.

Exit mobile version