ಉಜಿರೆ: ಎರ್ನೋಡಿ ಶ್ರೀ ಆದಿನಾಗಬ್ರಹ್ಮ ಮೊಗೇರ್ಕಳ ಸೇವಾ ಟ್ರಸ್ಟ್ ನ ಸಾಮಾನ್ಯ ಸಭೆ ಎರ್ನೋಡಿ ಸಭಾಭವನದಲ್ಲಿ ಜರಗಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಟ್ರಸ್ಟ್ ಅಧ್ಯಕ್ಷ ಯು. ಬಾಬು ಮೊಗೇರ ಎರ್ನೋಡಿ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಜಯಂತ ಶೆಟ್ಟಿ ಕುಂಟಿನಿ, ಕೋಶಾಧಿಕಾರಿ ಸಂಜೀವ ಶೆಟ್ಟಿ ಕುಂಟಿನಿ, ಸಲಹೆಗಾರರಾದ ಉದಯ ಶೆಟ್ಟಿ ಪಾರ, ಮೋಹನ್ ಕನ್ಯಾಡಿ, ಚಲ್ಲ ಮೊಗೇರ, ಗಿರೀಶ್ ಗೌಡ ಕಾಶಿಬೆಟ್ಟು, ಪ್ರದೀಪ್ ಕುಮಾರ್ ಎರ್ನೋಡಿ, ಪದ್ಮ ನಾಯ್ಕ್ ಪಾರ, ರಮೇಶ್ ಪಜಿರಡ್ಕ, ದಿಲೀಪ್ ಎರ್ನೋಡಿ, ದಿನೇಶ್ ಗೌಡ ಕಾಶಿಬೆಟ್ಟು, ದೀಕ್ಷಿತ್ ಎರ್ನೋಡಿ,ಶಮಿತ್ ಎರ್ನೋಡಿ ರಾಜೇಶ್ ಜೋಗಿ ಕಾಶಿಬೆಟ್ಟು, ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ನಿಧನರಾದ ಸೇವಾ ಟ್ರಸ್ಟ್ ನ ನಿರ್ದೇಶಕ ದಿ. ಯು. ಅಮ್ಮು ಮೊಗೇರ ಎರ್ನೋಡಿ ಅವರಿಗೆ ನುಡಿ ನಮನ ಸಲ್ಲಿಸಲಾಯಿತು.