Site icon Suddi Belthangady

ಮಿತ್ತಬಾಗಿಲು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ರಚನೆ: ಅಧ್ಯಕ್ಷರಾಗಿ ಕೇಶವ ಫಡಕೆ, ಕಾರ್ಯದರ್ಶಿಯಾಗಿ ಸಂದೀಪ್ ಪೂಜಾರಿ

ಕೊಲ್ಲಿ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಮಿತ್ತಬಾಗಿಲು ಇದರ ಮಹಾಸಭೆ ಜು.20ರಂದು ಸಮಿತಿಯ ಅಧ್ಯಕ್ಷ ಸುರೇಶ್ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ಕೊಲ್ಲಿ ಶ್ರೀ ದುರ್ಗಾದೇವಿ ದೇವಾಸ್ಥಾನದ ವಠಾರದಲ್ಲಿ ಜರುಗಿತು.

ನೂತನ ಸಮಿತಿಗೆ ಪದಾಧಿಕಾರಿಗಳನ್ನು ಆರಿಸಲಾಯಿತು. ಗೌರವಾಧ್ಯಕ್ಷರಾಗಿ ಸುರೇಶ್ ಪೂಜಾರಿ ಬನದಬಾಗಿಲು, ಅಧ್ಯಕ್ಷರಾಗಿ ಕೇಶವ ವಿ. ಫಡಕೆ ಸುಭಾಶ್‌ಭಾಗ್‌, ಉಪಾಧ್ಯಕ್ಷರಾಗಿ ವನಿತಾ ಕುರುಬರಗುಡ್ಡೆ, ಕಾರ್ಯದರ್ಶಿಯಾಗಿ ಸಂದೀಪ್ ಪೂಜಾರಿ ಬೊಳ್ಳಾಜೆ, ಜೊತೆ ಕಾರ್ಯದರ್ಶಿಯಾಗಿ ಮೀನಾಕ್ಷಿ ಮಾಲೂರು, ಕೋಶಾಧಿಕಾರಿಯಾಗಿ ಮೋನಪ್ಪ ಗೌಡ ಅವರನ್ನು ಆಯ್ಕೆ ಮಾಡಲಾಯಿತು. ಗೌರವ ಸಲಹೆಗಾರರಾಗಿ ದಾಸಪ್ಪ ಗೌಡ ಕಂಜಾನು, ಕೆ. ವಾಸುದೇವ ರಾವ್ ಕಕ್ಕೆನೇಜಿ, ಕೆ. ಕೃಷ್ಣಪ್ಪ ಪೂಜಾರಿ, ವಿಜಯ ಗೌಡ, ಸುಧಾಕರ ಪೂಜಾರಿ, ಎಸ್. ವಿನಯಚಂದ್ರ, ಸ್ವಸ್ತಿಕ್, ಅಭಿಜಿತ್‌, ನಾರಾಯಣ ಪೂಜಾರಿ, ಗುರುಪ್ರಸಾದ್, ನಿತೇಶ್, ಪ್ರಶಾಂತ್, ಹರ್ಷಿತ್, ನಿತೇಶ್ ಸಂಜೀವ ಗೌಡ, ರಂಜಿತ್, ರಮೇಶ್, ವಿಜಯ ಪೂಜಾರಿ, ಗೋಪಾಲ ಪೂಜಾರಿ, ಕೃಷ್ಣ ದೇವಾಡಿಗ ಅವರನ್ನು ಆಯ್ಕೆ ಮಾಡಲಾಯಿತು.

Exit mobile version