Site icon Suddi Belthangady

ನೇತ್ರಾವತಿ: ಜು.20ರಂದು ಪತ್ತೆಯಾದ ಶವದ ಗುರುತು ಪತ್ತೆ-ಸಂಬಂಧಿಕರ ಆಗಮನ

ಧರ್ಮಸ್ಥಳ: ನೇತ್ರಾವತಿ ನದಿಯ ಪಕ್ಕದಲ್ಲಿ ಅಪರಿಚಿತ ಶವ ಜು.20ರಂದು ಪತ್ತೆಯಾಗಿತ್ತು. ಪೊಲೀಸರ ಪ್ರಕಟಣೆಯ ಮೂಲಕ ಈಗಾಗಲೇ ಶವದ ಗುರುತು ಪತ್ತೆಯಾಗಿದೆ. ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಇದ್ಲಾಪುರ ಗ್ರಾಮದ ಶಂಕರಗೌಡ ಪೊಲೀಸ್ ಪಾಟೀಲ್ ಎಂಬವರ ಪುತ್ರ ಬಸವರಾಜ್ (34ವ) ಎಂದು ಗುರುತಿಸಲಾಗಿದೆ. ಬಸವರಾಜ್ ನಾಲ್ಕು ದಿನಗಳ ಹಿಂದೆ ನಾಪತ್ತೆಯಾಗಿದ್ದರು. ಇವರು ಕಳೆದ 20ತಿಂಗಳ ಹಿಂದೆ ಸರ್ಕಾರಿ ಶಿಕ್ಷಕ ಹುದ್ದೆಗೆ ನೇಮಕವಾಗಿದ್ದರು. ಈಗಾಗಲೇ ಶವದ ಮರಣೋತ್ತರ ಪರೀಕ್ಷೆ ನಡೆದು, ಕುಟುಂಬಸ್ಥರು ತಮ್ಮ ಊರಿಗೆ ತೆಗೆದುಕೊಂಡು ಹೋಗಲಿದ್ದಾರೆ.

Exit mobile version