ಬೆಳ್ತಂಗಡಿ: ಕೊಕ್ಕಡ ಕಾಡಾನೆಗಳ ಹಾವಳಿಯಿಂದಾಗಿ ದುಬಾರೆಯ ವಿಶೇಷ ತಂಡ ಆನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆಯಲ್ಲಿ ತೊಡಗಿದೆ. ಆದರೆ, ಪೆರಿಯಶಾಂತಿ ಬಳಿ ಕಾಡಾನೆಗಳು ಮತ್ತೆ ಮತ್ತೆ ಬೀದಿಬದಿ ಅಂಗಡಿಗಳತ್ತ ಬರುತ್ತಿವೆ. ಅಲ್ಲಿ ಹಲಸಿನ ಹಣ್ಣು ಮಾರಾಟ ಮಾಡುತ್ತಿದ್ದು,ಅದರ ವಾಸನೆಗೆ ಆನೆಗಳು ಪೆರಿಯಶಾಂತಿಯತ್ತ ಬರುತ್ತಿರುವುದರಿಂದ ಆತಂಕ ಮನೆ ಮಾಡಿರುವ ಹಿನ್ನಲೆಯಲ್ಲ ಬೆಳಗ್ಗಿನಿಂದಲೇ ಬೀದಿ ಬದಿಯ ಅಂಗಡಿಗಳ ತೆರವು ಕಾರ್ಯ ಆರಂಭಗೊಂಡಿದೆ.
ಅರಣ್ಯ ಇಲಾಖೆಯ ಅಧಿಕಾರಿಗಳ ನೇತೃತ್ವದಲ್ಲಿ ತೆರವು ಕಾರ್ಯ ಆರಂಭಗೊಂಡಿದ್ದು, ಪೆರಿಯಶಾಂತಿಯಿಂದ ಕುದ್ರಾಯ ತನಕದ ರಾಷ್ಟ್ರೀಯ ಹೆದ್ದಾರಿಯ ಬೀದಿಬದಿಯ ಅಂಗಡಿಗಳನ್ನು ತೆರವುಗೊಳಿಸಲು ಅಧಿಕಾರಿಗಳು ಮುಂದಾಗಿದ್ದಾರೆ.