ಬೆಳ್ತಂಗಡಿ: ಸರಕಾರಿ ಪ್ರೌಢ ಶಾಲೆ ಗೇರುಕಟ್ಟೆಯಲ್ಲಿ ಜು.19ರಂದು 2024-25ನೇ ಸಾಲಿನ SSLC ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಅಲ್ಲದೆ ಮಾದಕವಸ್ತು ದುರುಪಯೋಗ ತಡೆಗಟ್ಟುವಿಕೆ ಬಗ್ಗೆ ಬೆಳ್ತಂಗಡಿ ಆರಕ್ಷಕ ಠಾಣಾಧಿಕಾರಿ ಎ.ಎಸ್.ಐ.ಕುಶಾಲಪ್ಪ ಎಂ. ಇವರಿಂದ ಮಾಹಿತಿ ಕಾರ್ಯಾಗಾರ ನಡೆಯಿತು. ಬಳಿಕ ಮಾತನಾಡಿದ ಅವರು ಮಾದಕ ವಸ್ತು ಸೇವನೆಯಿಂದ ಆಗುವ ದುಷ್ಪರಿಣಾಮಗಳು, ಇವುಗಳಿಂದ ದೂರವಿರಲು ಮಾರ್ಗೋಪಾಯಗಳು ಹಾಗೂ ಸ್ವಸ್ಥ ಸಮಾಜದ ನಿರ್ಮಾಣದಲ್ಲಿ ವಿದ್ಯಾರ್ಥಿಗಳು ಕೈಗೊಳ್ಳಬಹುದಾದ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದರು.
ಮುಖ್ಯ ಶಿಕ್ಷಕಿ ಈಶ್ವರಿ ಕೆ.ಅವರು ಅಧ್ಯಕ್ಷತೆ ವಹಿಸಿ, ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ 2025-26ನೇ ಶೈಕ್ಷಣಿಕ ವರ್ಷದ ಪಠ್ಯಕ್ರಮ, ಪರೀಕ್ಷಾ ಮಾಹಿತಿ ಹಾಗೂ ಮಾದಕ ವಸ್ತು ಸೇವನೆ ದುಷ್ಪರಿಣಾಮಗಳ ಬಗ್ಗೆ ಮಾಹಿತಿ ನೀಡಿದರು.
ಶಿಕ್ಷಕಿ ಜ್ಯೋತಿ ಅವರು 10ನೇ ತರಗತಿ ವಿದ್ಯಾರ್ಥಿಗಳಿಗೆ ವಾರ್ಷಿಕ ಕ್ರಿಯಾಯೋಜನೆ, ಅಧ್ಯಯನ ಮಾಡುವ ರೀತಿಯ ಬಗ್ಗೆ ತಿಳಿಸಿದರು. ಮಮತಾ ವಿದ್ಯಾರ್ಥಿಗಳ ಸನ್ಮಾನ ಕಾರ್ಯಕ್ರಮ ನೆರವೇರಿಸಿದರು. ಎಸ್.ಡಿ.ಎಮ್.ಸಿ ಉಪಾಧ್ಯಕ್ಷ ಗೋಪಾಲಗೌಡ, ಸದಸ್ಯರಾದ ಜಯಂತಿ ಹಾಗೂ ಪ್ರೇಮ ಕಾರ್ಯಕ್ರಮ ಚಂದಗಾಣಿಸಿಕೊಟ್ಟರು. ಶಿಕ್ಷಕರಾದ ಅಜಿತ್ ಕುಮಾರ್, ಶೈಲಜ, ಅಭಿಷೇಕ್, ಕಛೇರಿ ಸಹಾಯಕರಾದ ಶಿವಶಂಕರ್ ಕಾರ್ಯಕ್ರಮಕ್ಕೆ ಸಹಕರಿಸಿದರು. ರಮ್ಯಾ ಸ್ವಾಗತಿಸಿ, ದಿನೇಶ್ ನಿರೂಪಿಸಿ ಕೆಂಚ ವೀರಪ್ಪ ಧನ್ಯವಾದವಿತ್ತರು.