ಮಡಂತ್ಯಾರು: ವರ್ತಕ ಬಂಧು ಸಹಕಾರ ಸಂಘದ 2024-25ನೇ ಸಾಲಿನ ಮಹಾಸಭೆಯು ಜು.20ರಂದು ಮಡಂತ್ಯಾರು ಗ್ರಾಮ ಪಂಚಾಯತ್ ನ ಸಮುದಾಯ ಸಭಾ ಭವನದಲ್ಲಿ ನಡೆಯಿತು.
ಮಹಾಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಜಯಂತ್ ಶೆಟ್ಟಿ ವಹಿಸಿದರು. ಸಂಘವು ರೂ. 8.43 ಠೇವಣಿ ಸಂಗ್ರಹಿಸಿ ರೂ. 9.45ಕೋಟಿ ದುಡಿಯುವ ಬಂಡವಾಳ ದೊಂದಿಗೆ. ರೂ. 48ಕೋಟಿಗೂ ಮಿಕ್ಕಿದ ವ್ಯವಹಾರ ನಡೆಸಿದೆ ಎಂದು ಅಧ್ಯಕ್ಷರು ತಿಳಿಸಿದರು.
ಮಹಾ ಸಭೆಯಲ್ಲಿ ಮುಖ್ಯ ಸಲಹೆಗಾರರಾದ ಮೋನಪ್ಪ ಪೂಜಾರಿ ಕಂಡೆತ್ಯಾರು ಮತ್ತು ನಿತ್ಯಾನಂದ, ನಿರ್ದೇಶಕರು ಗಳಾದ ಹೈದರ್ ಬಿ., ಕಿಶೋರ್ ಕುಮಾರ್ ಶೆಟ್ಟಿ, ವಿಜಯಚಂದ್ರ, ಕಾಂತಪ್ಪ ಗೌಡ, ಉದಯಕುಮಾರ್ ಜೈನ್, ಯಶೋಧರ ಬಂಗೇರ, ವಿನೋದ್ ಬಾಳಿಗ, ಗಿರೀಶ್ ಪೈ,ಅಶೋಕ್ ಭವಾನಿ, ಗೋಪಾಲಕೃಷ್ಣ ಕೆ. ವಾಸುದೇವ ಗೌಡ, ಡಿಗ್ನ ಮೊರಾಸ್, ತೆಲ್ಮಾ ಮಾಡ್ತಾ, ಅಮಿತಾ ಲೋಬೊ, ಪಾರೆಂಕಿ ಶ್ರೀ ಮಹಿಷ ಮರ್ದಿನಿ ದೇವಸ್ಥಾನದ ಮಾಜಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ವಿಠಲ ಶೆಟ್ಟಿ ಮೂಡಯೂರು,
ಸಂಘದ ಸದಸ್ಯರು, ಉಪಸ್ಥಿತರಿದ್ದರು.
ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡೆಲ್ಸನ್ ಮೋನಿಸ್
ಮಹಾಸಭೆಯ ನೋಟಿಸ್ ಓದಿ, ವರದಿ ಮಂಡಿಸಿದರು. ಸಿಬ್ಬಂದಿಗಳು ಸಹಕರಿಸಿದರು. ಉಪಾಧ್ಯಕ್ಷ ಯೋಗೀಶ್ ಪೂಜಾರಿ ಕಡ್ತಿಲ ಸ್ವಾಗತಿಸಿದರು. ನಿರ್ದೇಶಕ ತುಳಸಿದಾಸ್ ಪೈ ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕ ಉದಯಕುಮಾರ್ ಜೈನ್ ವಂದಿಸಿದರು.