Site icon Suddi Belthangady

ಅರಸಿನಮಕ್ಕಿ: ಹಾಡು ಹಗಲೇ ಕಾಡು ಹಂದಿ ತಿವಿದು ಗಾಯ

ಅರಸಿನಮಕ್ಕಿ: ಜು.19ರಂದು ಉಡ್ಯೆರೆ ಸಮೀಪ ತೋಟದ ಕೆಲಸಕ್ಕೆoದು ರೆಖ್ಯ ಬೂಡು ನಿವಾಸಿ ಬಾಲಕೃಷ್ಣ ಬಂದಿದ್ದು ಸಂಜೆ 4ಗಂಟೆಗೆ ಪದ್ಮಯ್ಯ ಗೌಡ ಅವರ ತೋಟದಲ್ಲಿ ಗೊಬ್ಬರ ಹಾಕುತ್ತಿದ್ದ ವೇಳೆ ಕಾಡು ಹಂದಿಯೊಂದು ಅವರ ಮೇಲೆ ದಾಳಿ ನಡೆಸಿ ಸೊಂಟ, ಕೈ, ಕಾಲಿನ ಭಾಗವನ್ನು ತಿವಿದು ಗಾಯಗೊಳಿಸಿದ ಘಟನೆ ನಡೆದಿದೆ.

ತಕ್ಷಣ ಅವರನ್ನು ಸ್ಥಳೀಯರು ಚಿಕಿತ್ಸೆಗಾಗಿ ನೆಲ್ಯಾಡಿ ಅಶ್ವಿನಿ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ವಿಷಯ ತಿಳಿದ ಸಮಾಜ ಸೇವಕ, ಧಾರ್ಮಿಕ ಮುಖಂಡ ಕಿರಣ್ ಚಂದ್ರ ಪುಷ್ಪಗಿರಿ, ಉಪ್ಪಿನಂಗಡಿ ವಲಯ ಅರಣ್ಯಧಿಕಾರಿ ರಾಘವೇಂದ್ರ, ಪ್ರೊಬೆಷನರಿ ಎ.ಸಿ.ಎಫ್ ಹಸ್ತ ಶೆಟ್ಟಿ ಅವರು ಆಸ್ಪತ್ರೆಗೆ ಆಗಮಿಸಿ ಬಾಲಕೃಷ್ಣ ಅವರಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ.

Exit mobile version