Site icon Suddi Belthangady

ಕೊಕ್ಕಡ: ಆನೆ ದಾಳಿಯಿಂದ ಮೃತಪಟ್ಟ ಬಾಲಕೃಷ್ಣ ಶೆಟ್ಟಿ ಮನೆಗೆ ರಕ್ಷಿತ್ ಶಿವರಾಂ ಭೇಟಿ- ಮಗಳಿಗೆ ಉದ್ಯೋಗದ ಭರವಸೆ

ಕೊಕ್ಕಡ: ಆನೆ ದಾಳಿಯಿಂದ ಮೃತಪಟ್ಟ ಬಾಲಕೃಷ್ಣ ಶೆಟ್ಟಿ ಮನೆಗೆ ರಕ್ಷಿತ್ ಶಿವರಾಂ ಜು. 18ರಂದು ಭೇಟಿ ನೀಡಿ ಮನೆಯವರಿಗೆ ಸಾಂತ್ವನ ಹೇಳಿದರು. ಈಗಾಗಲೇ ಅರಣ್ಯ ಸಚಿವರ ಬಳಿ ಗರಿಷ್ಟ ಪರಿಹಾರ ನೀಡುವಂತೆ ಚರ್ಚಿಸಿದ್ದೇನೆ. ಜೊತೆಗೆ ಇಂಜಿನಿಯರಿಂಗ್ ಓದಿರುವ ಮಗಳಿಗೆ ಉದ್ಯೋಗ ನೀಡುವ ಬಗ್ಗೆಯೂ ಚರ್ಚೆ ಮಾಡಿದ್ದೇನೆ ಎಂದು ಭರವಸೆಯ ಮಾತುಗಳನ್ನು ಮನೆಯವರಿಗೆ ನೀಡಿದ್ದಾರೆ.

ಸೌತಡ್ಕ ದೇವಳದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಸುಬ್ರಮಣ್ಯ ಶಬರಾಯ, ಕಾಂಗ್ರೆಸ್ ಮುಖಂಡರಾದ ದಯಾನಿಶ್, ಸಿರ್ಲಿ ಡಿಸೋಜ, ನಿತಿನ್ ಕಡೀರ ಇನ್ನಿತರರು ಉಪಸ್ಥಿತರಿದ್ದರು.

Exit mobile version