Site icon Suddi Belthangady

ಸುಮ್ಮನೆ ಆನೆ ಇದೆ ಎಂಬ ವದಂತಿ ಹಬ್ಬಿಸದಿರಿ-ಊರಿನವರನ್ನೊಳಗೊಂಡ ವಾಟ್ಸಾಪ್ ಗ್ರೂಪ್ ಮಾಡಲು ಅಧಿಕಾರಿಗಳ ನಿರ್ಧಾರ-ಸುದ್ದಿ ಬಿಡುಗಡೆಗೆ ಪ್ರೊಬೇಷನರಿ ಎಸಿಎಫ್ ಹಸ್ತಾ ಶೆಟ್ಟಿ ಮಾಹಿತಿ

ಕೊಕ್ಕಡ: ಸೌತಡ್ಕದಲ್ಲಿ ಜು.17ರಂದು ದಾಳಿ ಮಾಡಿ ಒಬ್ಬ ವ್ಯಕ್ತಿ ಸಾವನ್ನಪ್ಪಿದ ನಂತರ ತಡರಾತ್ರಿವರೆಗೆ ಕಾರ್ಯಾಚರಣೆ ಮಾಡಿದ ನಂತರ ಆನೆ ಜೋಡಿ ಮೀಸಲು ಅರಣ್ಯದತ್ತ ತೆರಳಿವೆ ಎಂದು ಅರಣ್ಯ ಇಲಾಖೆಯ ಪ್ರೊಬೇಷನರಿ ಎಸಿಎಫ್ ಹಸ್ತಾ ಶೆಟ್ಟಿ ತಿಳಿಸಿದ್ದಾರೆ.

ಇದಾದ ನಂತರ ಅಲ್ಲಲ್ಲಿ ಆನೆ ಇದೆ ಅನ್ನುವ ವದಂತಿ ಹರಿದಾಡುತ್ತಿದ್ದು,ಜನರು ಆತಂಕದಲ್ಲಿದ್ದಾರೆ. ಅಲ್ಲದೇ ಅರಣ್ಯ‌ಇಲಾಖೆಯ ಅಧಿಕಾರಿಗಳು ಕೂಡ ವದಂತಿಯ ಬೆನ್ನು ಹತ್ತಿ ಹೋಗಬೇಕಾಗಿದೆ. ಆದರೆ ಇಂತಹ ವದಂತಿಗಳಿಗೆ ಕಿವಿಗೊಡಬೇಡಿ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಾಟ್ಸಾಪ್ ಗ್ರೂಪ್ ಮಾಡಿದ್ದೇವೆ, ನಾವೇ ಮಾಹಿತಿ ತಿಳಿಸುತ್ತೇವೆ: ಹಸ್ತಾ ಶೆಟ್ಟಿ, ಪ್ರೊಬೇಷನರಿ ಎಸಿಎಫ್ ಈಗಾಗಲೇ ಆನೆ ಹಾವಳಿ ಇರುವ ಪ್ರದೇಶಗಳಾದ ಕೌಕ್ರಾಡಿ, ಕೊಕ್ಕಡ ಗ್ರಾಮದ ಜನರ ವಾಟ್ಸಾಪ್ ಗ್ರೂಪ್ ಮಾಡಿದ್ದೇವೆ. ಆನೆ ಹಾವಳಿಯ ಬಗ್ಗೆ ನಾವೇ ಮಾಹಿತಿ ನೀಡುತ್ತೇವೆ, ವದಂತಿಗಳಿಗೆ ಕಿವಿಗೊಡಬೇಡಿ ಎಂದು ಜನರಲ್ಲಿ ಪ್ರೊಬೇಷನರಿ ಎಸಿಎಫ್ ಹಸ್ತಾ ಶೆಟ್ಟಿ ಸುದ್ದಿಬಿಡಿಗಡೆಗೆ ತಿಳಿಸಿದ್ದಾರೆ.

Exit mobile version