Site icon Suddi Belthangady

ಪತ್ರಕರ್ತ ಭುವನೇಶ್ ಗೇರುಕಟ್ಟೆಗೆ ಮಾತೃವಿಯೋಗ

ಗೇರುಕಟ್ಟೆ: ಇಲ್ಲಿನ ಮಾತೃಕೃಪಾ ನಿವಾಸಿ, ಪತ್ರಕರ್ತ, ನಾಳ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ಭುವನೇಶ್ ಗೇರುಕಟ್ಟೆಯವರ ತಾಯಿ ಸರೋಜಿನಿ(72ವ) ಅವರು ಜು.18ರಂದು ವಿಧಿವಶರಾಗಿದ್ದಾರೆ.

ಅಲ್ಪಕಾಲದ ಅಸೌಖ್ಯದಿಂದ ಬಳಲುತ್ತಿದ್ದ ಸರೋಜಿನಿ ಅವರು ಇಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಮೃತರ ಅಂತ್ಯ ಸಂಸ್ಕಾರ ನಾಳೆ ಬೆಳಗ್ಗೆ ನಡೆಯಲಿರುವುದಾಗಿ ತಿಳಿದುಬಂದಿದೆ. ಅವರು ಒಬ್ಬ ಪುತ್ರ, ಸೊಸೆ, ಮೊಮ್ಮಕ್ಕಳು, ಸಹೋದರಿಯನ್ನು ಅಗಲಿದ್ದಾರೆ.

Exit mobile version