Site icon Suddi Belthangady

ಕೊಕ್ಕಡದಲ್ಲಿ ನಡೆದ ಆನೆ ದಾಳಿಗೆ ರೈತ ವ್ಯಾಪ್ತಿ ಜನರಿಂದ ಆಕ್ರೋಶ

ಕೊಕ್ಕಡ: ಸೌತಡ್ಕದಲ್ಲಿ ಜು.17 ರಂದು ಆನೆ ದಾಳಿಯಿಂದಾಗಿ ಬಾಲಕೃಷ್ಣ ಶೆಟ್ಟಿಯವರು ಸಾವನ್ನಪಿರುವ ಘಟನೆಗೆ ರೈತಾಪಿ ವರ್ಗದಿಂದ ಆಕ್ರೋಶ ವ್ಯಕ್ತವಾಗಿದ್ದು, ಈ ಸಾವಿಗೆ ಯಾರು ಜವಾಬ್ದಾರಿ ಎಂದು ಪ್ರಶ್ನೆ ಮಾಡಿದ್ದಾರೆ.

‘ಒಂದಷ್ಟು ದಿನ ಅರಣ್ಯ ಇಲಾಖೆಗೆ ಅವಕಾಶ ನೀಡಿದ್ದೇವೆ,ಕಾಡಿನಿಂದ ನಾಡಿಗೆ ಬಂದ ಆನೆಗಳನ್ನು ಮತ್ತೆ ಆನೆ ಕಾರಿಡಾರ್ ಒಳಗೆ ಕಳಿಸುವ ವ್ಯವಸ್ಥೆ ಮಾಡಬೇಕು.ಅದನ್ನು ಇಲಾಖೆ ಮಾಡದೆ ಇದ್ದರೆ ಚಳಿ ಬಿಡಿಸುವ ವ್ಯವಸ್ಥೆ ನಾವು ಮಾಡುತ್ತೇವೆ. ಬೇರೆ ಬೇರೆ ಕಾರಣಕ್ಕೆ ಕೋಟ್ಯಾಂತರ ರೂಪಾಯಿ ಬಿಲ್ ಮಾಡಿಸುವ ಇಲಾಖೆ, ಅರಣ್ಯ ರಕ್ಷಣೆ ಮತ್ತು ಕಾಡು ಪ್ರಾಣಿ ರಕ್ಷಣೆಯ ಮಹತ್‌ ಕಾರ್ಯವನ್ನು ಮರೆತಂತಿದೆ.
ಇಲಾಖೆಯ ಅಕ್ರಮಗಳ ಸಂಗತಿಗಳನ್ನು ದಾಖಲೆ ಸಮೇತ ನಾವು ಇಡುತ್ತೇವೆ, ಮನುಷ್ಯ ಮತ್ತು ಆನೆಗಳ ಮಧ್ಯೆ ನಡೆಯುವ ಸಂಘರ್ಷ ನಡೆಯದ ಹಾಗೆಯೇ ಶಾಶ್ವತ ಪರಿಹಾರ ಮಾಡದೆ ಇದ್ದರೆ ಮುಂದಿನ ಹೋರಾಟಕ್ಕೆ ಅರಣ್ಯ ಇಲಾಖೆಯೆ ನೇರ ಹೊಣೆಯಾಗುತ್ತದೆ ಎಂದು ಎಚ್ಚರಿಕೆ ಕರೆಗಂಟೆ ನೀಡಿದ್ದಾರೆ.

Exit mobile version