Site icon Suddi Belthangady

ಆಳ್ವಾಸ್‌ನಲ್ಲಿ ನಡೆದ 10 ದಿನಗಳ ಎನ್‌.ಸಿ.ಸಿ. ಶಿಬಿರ ಸಂಪನ್ನ

ಬೆಳ್ತಂಗಡಿ: ಮೂಡುಬಿದಿರೆ ನ್ಯಾಷನಲ್ ಕ್ಯಾಡೆಟ್ ಕಾರ್ಪ್ಟ (ಎನ್‌ಸಿಸಿ) 21 ಕರ್ನಾಟಕ ಬೆಟಾಲಿಯಾನ್‌ನಿಂದ ಅಳ್ವಾಸ್‌ನ ವಿದ್ಯಾಗಿರಿಯ ಅವರಣದಲ್ಲಿ 10 ದಿನಗಳ ಸಂಯೋಜಿತ ವಾರ್ಷಿಕ ತರಬೇತಿ ಶಿಬಿರ ನಡೆಯಿತು. ಮಂಗಳೂರಿನ ಎನ್‌ಸಿಸಿ ಸಮೂಹದ ಮುಖ್ಯ ಕಛೇರಿಯ ವ್ಯಾಪ್ತಿಗೊಳಪಟ್ಟ ವಿವಿಧ ಬ್ಯಾಟಾಲಿಯನ್‌ಗಳಿಂದ 598 ಎನ್‌.ಸಿ.ಸಿ. ಕೆಡೆಟ್‌ಗಳು ಭಾಗವಹಿಸಿದ್ದರು.

ಈ ಶಿಬಿರವು ಮೈಸೂರಿನಲ್ಲಿ ನಡೆಯಲಿರುವ ಫಲ್ ಸೇನಾ ಸ್ಪರ್ಧೆಗೆ ಎನ್‌ಸಿಸಿ ಕೆಡೆಟ್‌ಗಳನ್ನು ತರಬೇತಿಗೊಳಿಸುವ ಉದ್ದೇಶವನ್ನು ಹೊಂದಿತ್ತು. ಸುಮಾರು 133 ಕೆಡೆಟ್‌ಗಳಿಗೆ ಹೈರಿಂಗ್, ಬ್ಯಾಬಲ್ ಕ್ರಾಪ್ಟ್, ಡ್ರಿಲ್, ನಕ್ಷೆ ಓದುವಿಕೆ, ಲೈಫಲ್‌ನ ನಿರ್ವಹಣೆ, ಫೀಲ್ಡ್ ಕ್ರಾಫ್ಟ್, ಮತ್ತು ಮಿಲಿಟರಿ ವಿಷಯಗಳಲ್ಲಿ ತರಬೇತಿ ನೀಡಲಾಯಿತು. ಮಂಗಳೂರಿನ ಎನ್‌ಸಿಸಿ ಸಮೂಹದ ಮುಖ್ಯ ಕಛೇರಿಯಿಂದ ಒಟ್ಟು ೮೩ ಕೆಡೆಟ್‌ಗಳು ಮೈಸೂರಿನಲ್ಲಿ ನಡೆಯುವ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.

ಮಂಗಳೂರಿನ ಎನ್‌ಸಿಸಿ ಸಮೂಹದ ಗ್ರೂಪ್ ಕಮಾಂಡರ್ ಕರ್ನಲ್ ವಿರಾಜ್ ಕಾಮತ್ ಮಾತನಾಡಿ, ಶಿಬಿರಗಳಲ್ಲಿ ಕಲಿಯುವ ಶಿಸ್ತು, ದೇಶಭಕ್ತಿ, ತಾಳ್ಮೆ ಮತ್ತು ಒಗ್ಗಟ್ಟು ಉತ್ತಮ ವ್ಯಕ್ತಿತ್ವವಿಕಾಸಕ್ಕೆ ನೆರವಾಗುತ್ತದೆ ಎಂದರು. ಶಿಸ್ತು ಮತ್ತು ಸ್ವಚ್ಛತೆ ಕೇವಲ ಶಿಬಿರದ ಪರಿಸರದಲ್ಲಷ್ಟೇ ಅಲ್ಲ, ದಿನ ನಿತ್ಯದ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು. ನಂತರ ಕೆಡೆಟ್‌ಗಳಿಂದ ಸಾಂಸ್ಕೃತಿಕ ಕಠ್ಯಕ್ರಮ ನಡೆಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ನೀಡಿ ಗೌರವಿಸಲಾಯಿತು.

ಕಠ್ಯಕ್ರಮದಲ್ಲಿ ಕಮಾಂಡಿÂಗ್‌ ಆಫೀಸರ್ 9೧ ಕರ್ನಾಟಕ ಬೆಟಾಲಿಯಾನ್‌ನ ಕರ್ನಲ್ ರಾಹುಲ್ ಚೌಹಾನ್, ಅಡಳಿತಾಧಿಕಾರಿ ಲೆಫ್ಟಿನೆಂಟ್ ಕರ್ನಲ್ ಗುರೀಂದರ್ ಸಿಂಗ್, ಸುಬೇದಾರ್ ಮೇಜ‌ರ್ ಉನ್ನಿಕೃಷ್ಣನ್ ಹಾಗೂ ಇನ್ನಿತರ ಎನ್‌ಸಿಸಿ ಅಧಿಕಾರಗಳು, ಮಾರ್ಗದರ್ಶಕರು ಇದ್ದರು.

Exit mobile version