Site icon Suddi Belthangady

ಧರ್ಮಸ್ಥಳ: ಕಾಡಾನೆ ದಾಳಿ: ಕೃಷಿ ಹಾನಿ

ಧರ್ಮಸ್ಥಳ: ಗ್ರಾಮದ ನೇರ್ತನೆಯಲ್ಲಿ ಜು.16ರಂದು ತಡ ರಾತ್ರಿ ಕಾಡಾನೆಗಳು ದಾಳಿ ನಡೆಸಿ ವ್ಯಾಪಕವಾಗಿ ಕೃಷಿಗೆ ಹಾನಿ ಉಂಟುಮಾಡಿದ ಬಗ್ಗೆ ವರದಿಯಾಗಿದೆ.

ನೇರ್ತನೆ ಪರಿಸರದಲ್ಲಿ ರಾತ್ರಿ ವೇಳೆ ಕಾಡಾನೆಗಳು ಕಾಣಿಸಿಕೊಂಡಿದ್ದು, ಶ್ರೀನಿವಾಸ ಎಂಬವರ ತೋಟದ ತೆಂಗಿನ ಗಿಡಗಳನ್ನು ಹಾಗೂ ಅಡಿಕೆ ಗಿಡಗಳನ್ನು ನಾಶಪಡಿಸಿದೆ. ಈ ಪರಿಸರದ ಇತರ ಹಲವರ ತೋಟಗಳಿಗೂ ಕಾಡಾನೆ ನುಗ್ಗಿದ್ದು ಅಲ್ಲಲ್ಲಿ ಹಾನಿಯುಂಟುಮಾಡಿದೆ.

ಮುಖ್ಯ ರಸ್ತೆಯ ಬದಿಯಲ್ಲಿ ಕಾಡಾನೆಗಳು ಓಡಾಟ ನಡೆಸುತ್ತಿದೆ. ಕೊಕ್ಕಡದಲ್ಲಿ ಕಾಡಾನೆ ದಾಳಿಗೆ ವ್ಯಕ್ತಿ ಬಲಿಯಾಗಿರುವುದು, ಧರ್ಮಸ್ಥಳ ನೇರ್ತನೆ ಪರಿಸರದ ಜನರಲ್ಲಿಯೂ ಆತಂಕ ಮೂಡಿಸಿದೆ. ರಾತ್ರಿ ವೇಳೆ ರಸ್ತೆಯಲ್ಲಿ ಓಡಾಡಲೂ ಜನ ಭಯ ಪಡುವಂತಾಗಿದೆ.

Exit mobile version