Site icon Suddi Belthangady

ಕೊಕ್ಕಡ: ಸೌತಡ್ಕ ಗುಂಡಿ ಎಂಬಲ್ಲಿ ಕಾಡಾನೆಗಳು ಪ್ರತ್ಯಕ್ಷ: ಕಾಡಾನೆ ದಾಳಿಗೆ ಬಾಲಕೃಷ್ಣ ಶೆಟ್ಟಿ ಸ್ಥಳದಲ್ಲೇ ಮೃತ್ಯು

ಕೊಕ್ಕಡ: ಸೌತಡ್ಕ ಗುಂಡಿ ಎಂಬಲ್ಲಿ ಗೇರು ಪ್ಲಾಂಟೇಶನ್ ನಲ್ಲಿ ಬೆಳ್ಳಂಬೆಳ್ಳಗೆ ಎರಡು ಕಾಡಾನೆಗಳು ಪ್ರತ್ಯಕ್ಷವಾಗಿದ್ದು, ಓರ್ವ ವ್ಯಕ್ತಿಗೆ ಆನೆಯು ಸೋಂಡಿಲಿನಿಂದ ತಿವಿದು ಗಂಭೀರ ಗಾಯಗೊಳಿಸಿ ಆತ ಮೃತಪಟ್ಟ ಘಟನೆ ಜು.17ರಂದು ನಡೆದಿದೆ. ಮೃತ ವ್ಯಕ್ತಿ ಸೌತಡ್ಕದ ನಿವಾಸಿ ಬಾಲಕೃಷ್ಣ ಶೆಟ್ಟಿ(70ವ) ಎಂದು ತಿಳಿದುಬಂದಿದೆ.

ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಬಂದಿದ್ದರು. ನಡೆದುಕೊಂಡು ಬಾಲಕೃಷ್ಣ ಶೆಟ್ಟಿ ಎಂಬವರಿಗೆ ಸೊಂಡಿಲಿನಿಂದ ತಿವಿದು, ಗಂಭೀರ ಗಾಯಗೊಳಿಸಿ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಆನೆಗಳು ಅಲ್ಲೆ ಇದ್ದು, ಮೃತದೇಹ ಕೂಡ ಅಲ್ಲಿಯೇ ಇದೆ ಎಂದು ವರದಿಯಾಗಿದೆ. ಮೃತರು ಪತ್ನಿ ಸುಜಾತ ರೈ, ಮತ್ತು ಮಕ್ಕಳಾದ ವೇತನ್ ಶೆಟ್ಟಿ, ವೇದಿತಾಶೆಟ್ಟಿ ಮತ್ತು ಧನ್ಯತಾ ಶೆಟ್ಟಿ ಅವರನ್ನು ಅಗಲಿದ್ದಾರೆ.

Exit mobile version