Site icon Suddi Belthangady

ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಬೆಳ್ತಂಗಡಿ ವಲಯದ 23ನೇ ವಾರ್ಷಿಕ ಸಭೆ-ಬೆಳ್ತಂಗಡಿ ವಲಯದಲ್ಲಿ ಡ್ರೆಸ್ ಕೋಡ್ ಮಾಡಿ ಜಿಲ್ಲೆಗೆ ಮಾದರಿ- ಪದ್ಮಪ್ರಸಾದ್ ಜೈನ್

ಬೆಳ್ತಂಗಡಿ: ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ದ.ಕ., ಉಡುಪಿ ಜಿಲ್ಲೆ ಬೆಳ್ತಂಗಡಿ ವಲಯದ 23ನೇ ವಾರ್ಷಿಕ ಸಭೆಯು ಜು.15ರಂದು ಗುರುವಾಯನಕೆರೆ ಛಾಯಾಭವನದಲ್ಲಿ ಜರಗಿತು.

ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಷನ್ ಇದರ ಜಿಲ್ಲಾಧ್ಯಕ್ಷ ಪದ್ಮಪ್ರಸಾದ್ ಜೈನ್ ವಾರ್ಷಿಕ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ಬೆಳ್ತಂಗಡಿ ವಲಯದಲ್ಲಿ ಡ್ರೆಸ್ ಕೋಡ್ ಮಾಡಿ ಜಿಲ್ಲೆಗೆ ಮಾದರಿಯಾದ ವಲಯ ಹಾಗೂ ಫೋಟೋಗ್ರಾಫರ್ಸ್ ಸಂಘದಲ್ಲಿ ಪ್ರಥಮ ಮಹಿಳಾ ಅಧ್ಯಕ್ಷರಾಗಿರುವುದು ಬೆಳ್ತಂಗಡಿಗೆ ಹೆಮ್ಮೆ. ಎಲ್ಲಾ ಸದಸ್ಯರಿಗೆ ಛಾಯಾ ಸುರಕ್ಷಾ ಮಾಡುವಂತೆ ಸಲಹೆ ನೀಡಿ, ಸಂಘಟನೆ ಬಲಪಡಿಸಬೇಕಾದರೆ ಸದಸ್ಯರು ಸಂಘದ ಚಟುವಟಿಕೆಯಲ್ಲಿ ಸಕ್ರಿಯವಾಗಿ ಭಾಗವಹಿಸುವಿಕೆ ಅಗತ್ಯವಾಗಿದ್ದು, ಸಾಮಾಜಿಕ ಚಟುವಟಿಕೆಗಳನ್ನು ಕೈಗೂಡಿಸಿಕೊಂಡು ಬೆಳ್ತಂಗಡಿ ವಲಯವು ಉತ್ತಮ ಹೆಸರನ್ನು ಗಳಿಸಿಕೊಂಡಿದೆ ಎoದರು. ವಲಯದ ಅಧ್ಯಕ್ಷೆ ಸಿಲ್ವಿಯಾ ಕೊರ್ಡೆರೋ ಅಧ್ಯಕ್ಷತೆ ವಹಿಸಿದ್ದರು.

ವೇದಿಕೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಯಾನಂದ ಬಂಟ್ವಾಳ, ಕೋಶಾಧಿಕಾರಿ ನವೀನ್ ರೈ ಪಂಜಳ, ಉಪಾಧ್ಯಕ್ಷ ರಮೇಶ್, ಕಲಾಶ್ರೀ ಸಂಚಾಲಕ ಕರುಣಾಕರ ಕಾನoಗಿ, ಜಿಲ್ಲಾ ಕ್ರೀಡಾ ಕಾರ್ಯದರ್ಶಿ ಭಾರದ್ವಾಜ್ ಉಜಿರೆ, ಜಿಲ್ಲಾ ಕಟ್ಟಡ ಸಮಿತಿ ಸದಸ್ಯ ಕೆ.ವಸಂತ್ ಶರ್ಮ ಉಜಿರೆ, ವಲಯದ ಸ್ಥಾಪಕ ಅಧ್ಯಕ್ಷ ಪಾಲಾಕ್ಷ ಪಿ ಸುವರ್ಣ ಬೆಳ್ತಂಗಡಿ. ಗೌರವಾಧ್ಯಕ್ಷ ಜಗದೀಶ್ ಜೈನ್ ಧರ್ಮಸ್ಥಳ. ಪ್ರಧಾನ ಕಾರ್ಯದರ್ಶಿ ವಿಜಯ ಎಚ್ ಪ್ರಸಾದ್ ಗೇರುಕಟ್ಟೆ. ಕೋಶಾಧಿಕಾರಿ ಹರೀಶ್ ಕೊಳ್ತಿಗೆ. ಉಪಸ್ಥಿತರಿದ್ದರು ಮಹಾಸಭೆಯಲ್ಲಿ ಭಾಗವಹಿಸಿದ ಎಲ್ಲಾ ಸದಸ್ಯರಿಗೆ ಗಿಫ್ಟನ್ನು ನೀಡಲಾಯಿತು ಈ ಸಂದರ್ಭದಲ್ಲಿ ಮುoದಿನ 2 ವರ್ಷದ ಅವಧಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು ಗಣೇಶ್ ಹೆಗ್ಡೆ ನಾರಾವಿ ಪ್ರಾರ್ಥನೆ ಗೈದರು. ಕೆ ವಸಂತ್ ಶರ್ಮ ಸ್ವಾಗತಿಸಿ ಪ್ರಧಾನ ಕಾರ್ಯದರ್ಶಿ ವಿಜಯ ಎಚ್ ಪ್ರಸಾದ್ ವಾರ್ಷಿಕ ವರದಿಯನ್ನು ಮಂಡಿಸಿದರು ಕೋಶಾಧಿಕಾರಿ ಹರೀಶ್ ಕೊಳ್ತಿಗೆ ಲೆಕ್ಕಪತ್ರ ಮಂಡನೆ ಮಾಡಿದರು ಜಗದೀಶ್ ಜೈನ್ ಹಾಗೂ ಉಮೇಶ್ ಮದ್ದಡ್ಕ ಕಾರ್ಯಕ್ರಮ ನಿರೂಪಿಸಿದರು

Exit mobile version