ಉಜಿರೆ: ಮುಂಡಾಜೆಯ ಪರಿಸರ ಪ್ರೇಮಿ, ಕಾರ್ಗಿಲ್ ವನದ ರೂವಾರಿ ಸಚಿನ್ ಭಿಡೆಯವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಹೆಬ್ರಿ ಅರಣ್ಯ ಇಲಾಖೆಯಿಂದ ನೆಲ, ಜಲ, ಪ್ರಾಣಿ ಸಂಕುಲ ಮತ್ತು ವನ್ಯ ಸಂರಕ್ಷಣೆ ಪ್ರಯುಕ್ತ ಹೆಬ್ರಿಯಲ್ಲಿ ಜು.12ರಂದು ನಡೆದ ಲಕ್ಷ ವೃಕ್ಷ ಗಿಡಗಳ ನಾಟಿ ಕಾರ್ಯಕ್ರಮದಲ್ಲಿ ಅರಣ್ಯ ಮಿತ್ರ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಹಣಾಧಿಕಾರಿ ಅನಿಲ್ ಕುಮಾರ್ ಎಸ್.ಎಸ್. ಮತ್ತು ಅತಿಥಿಗಳು ಉಪಸ್ಥಿತರಿದ್ದರು.
ಮುಂಡಾಜೆಯ ಸಚಿನ್ ಭಿಡೆ ಅವರಿಗೆ ‘ಅರಣ್ಯ ಮಿತ್ರ ಪ್ರಶಸ್ತಿ’
