ವರದಿ: ಕಾಸಿಂ ಪದ್ಮುಂಜ
ಪದ್ಮುಂಜ: ಪದ್ಮುಂಜದಲ್ಲಿರುವ ಬಿಎಸ್‌ಎನ್‌ಎಲ್ ಮೊಬೈಲ್ ಟವರ್ ಮೂರು ತಿಂಗಳಾದರೂ ದುರಸ್ತಿಯಾಗದ ಕಾರಣ ಗ್ರಾಹಕರಿಗೆ ತೊಂದರೆಯಾಗುತ್ತಿರುವ ಕುರಿತು ಕಳೆದ ವಾರ ಸುದ್ದಿ ಬಿಡುಗಡೆ ಪತ್ರಿಕೆಯಲ್ಲಿ ಪ್ರಕಟಗೊಂಡಿದ್ದ ವರದಿಗೆ ಅಧಿಕಾರಿಗಳು ಸ್ಪಂದಿಸಿದ್ದಾರೆ. ಈ ಟವರ್ ಅನ್ನು 2 ಜಿಯಿಂದ 4 ಜಿಗೆ ಮೇಲ್ದರ್ಜೆಗೇರಿಸಲಾಗಿದ್ದು ಗ್ರಾಹಕರು ಕೃತಜ್ಞತೆ ಸಲ್ಲಿಸಿದ್ದಾರೆ. ವರದಿ ಪ್ರಕಟಗೊಂಡ ಕೂಡಲೇ ಸ್ಪಂದನೆ ನೀಡಿರುವ ಬಿಎಸ್‌ಎನ್‌ಎಲ್ ಇಲಾಖೆ ಅಧಿಕಾರಿಗಳು ಕೂಡಲೇ ಕಾರ್ಯಪ್ರವೃತ್ತರಾಗಿ 2 ಜಿಯಲ್ಲಿ ಕಾರ್ಯಾಚರಿಸುತ್ತಿದ್ದ ಬಿಎಸ್‌ಎನ್‌ಎಲ್ ಟವರನ್ನು ಅಭಿವೃದ್ಧಿ ಪಡಿಸಿ 4 ಜಿಯಾಗಿ ಉನ್ನತಿಗೇರಿಸಿದ್ದಾರೆ. ಈ ಮೂಲಕ ಬಳಕೆದಾರರಿಗೆ ಸಿಹಿ ಸುದ್ದಿ ನೀಡಿದ್ದಾರೆ. ಜು.15ರಿಂದ ಈ ಟವರ್ ಸಕ್ರಿಯವಾಗಿ ಕಾರ್ಯಾರಂಭಿಸಿದ್ದು ಬಳಕೆದಾರರು ಸಂತೋಷಗೊಂಡಿದ್ದಾರೆ. 4ಜಿ ಸೌಲಭ್ಯ ಪಡೆಯುವ ಸಲುವಾಗಿ ಗ್ರಾಹಕರು ತಮ್ಮ ಮೊಬೈಲ್‌ಗಳಿಂದ ಎಸಿಟಿ ವೋಲ್ಟ್ ಸಂದೇಶ ಟೈಪ್ ಮಾಡಿ 53733ನಂಬರ್‌ಗೆ ಕಳುಹಿಸಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.