ಓಡಿಲ್ನಾಳ: ಸ.ಉ.ಪ್ರಾ ಶಾಲೆಯಲ್ಲಿ 2025-26ನೇ ಸಾಲಿನ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಮಂತ್ರಿ ಮಂಡಲದ ಚುನಾವಣೆ ನಡೆಯಿತು. ಶಾಲಾ ಮುಖ್ಯಮಂತ್ರಿಯಾಗಿ ಕೆ. ಎನ್. ನಂದನ್ ಶರ್ಮ 8ನೇ ತರಗತಿ, ಉಪಮುಖ್ಯಮಂತ್ರಿಯಾಗಿ ಮಹಮ್ಮದ್ ಅರ್ಮನ್ 7 ನೇ ತರಗತಿ, ಹಾಗೂ ವಿರೋಧ ಪಕ್ಷದ ನಾಯಕನಾಗಿ ಅಶ್ವಿತ್ 8ನೇ ತರಗತಿl ಆಯ್ಕೆ ಆಗಿರುತ್ತಾರೆ. ಹಾಗೂ ಮಂತ್ರಿಮಂಡಲದ ಇತರ ಇಲಾಖೆಗಳಿಗೆ ಎಂಟನೇ ತರಗತಿ ಹಾಗೂ ಏಳನೇ ತರಗತಿಯ ವಿದ್ಯಾರ್ಥಿಗಳು ಆಯ್ಕೆಯಾಗಿರುತ್ತಾರೆ. ವಿದ್ಯಾರ್ಥಿಗಳಿಗೆ ಮಂತ್ರಿಮಂಡಲದ ಜವಾಬ್ದಾರಿಯನ್ನು ತಿಳಿಸಿ ಪ್ರಮಾಣವಚನವನ್ನು ವೀಣಾ ಕೆ. ಎಸ್. ಬೋಧಿಸಿದರು. ಮುಖ್ಯ ಶಿಕ್ಷಕಿ ಉಷಾ ಪಿ. ಇವರ ನೇತೃತ್ವದಲ್ಲಿ ಸಹ ಶಿಕ್ಷಕಿಯರ ಉಪಸ್ಥಿತಿಯಲ್ಲಿ ಚುನಾವಣೆ ಪ್ರಕ್ರಿಯೆ ನಡೆಯಿತು.
ಓಡಿಲ್ನಾಳ: ಸ.ಉ.ಪ್ರಾ ಶಾಲಾ ಮಂತ್ರಿ ಮಂಡಲ ರಚನೆ
