Site icon Suddi Belthangady

ವೇಣೂರು: ಚಿರತೆಯ ಚಲನವಲನ: ಬೋನು ಇರಿಸಿದ ಅಧಿಕಾರಿಗಳು

ವೇಣೂರು: ವಲಯ ಅಳದಂಗಡಿ ಶಾಖೆಯ ವ್ಯಾಪ್ತಿಯಲ್ಲಿನ ಪಿಲ್ಯ ಗ್ರಾಮದ ಉಲ್ಪೆ ಎಂಬಲ್ಲಿಯ ಸತೀಶ್ ತಮನಕರ್ ಅವರ ಜಾಗದ ಬಳಿ ಚಿರತೆಯ ಚಲನವಲನ ಕಂಡುಬಂದ ಹಿನ್ನೆಲೆಯಲ್ಲಿ ಜು.15ರಂದು ಅರಣ್ಯ ಇಲಾಖೆ ವತಿಯಿಂದ ಬೋನು ಇಡಲಾಯಿತು.

ವಲಯ ಅರಣ್ಯ ಅಧಿಕಾರಿ ಭರತ್ ಅವರ ಮಾರ್ಗದರ್ಶನದಲ್ಲಿ ಅಳದಂಗಡಿ ಶಾಖೆಯ ಉಪವಲಯ ಅರಣ್ಯ ಅಧಿಕಾರಿ ಹರಿಪ್ರಸಾದ್, ಗಸ್ತು ಅರಣ್ಯ ಪಾಲಕ ಮಂಜುನಾಥ್, ಅರಣ್ಯ ವೀಕ್ಷಕ ಪೂವಪ್ಪ ಸ್ಥಳೀಯರು ಈ ಕಾರ್ಯವನ್ನು ನಿರ್ವಹಿಸಿದರು.

Exit mobile version