Site icon Suddi Belthangady

ಗೇರುಕಟ್ಟೆ: ಕಳಿಯ ಗ್ರಾಮ ಪಂಚಾಯತ್ ನಲ್ಲಿ ಪ್ರಥಮ ಸುತ್ತಿನ ವಾರ್ಡ್ ಸಭೆ

ಬೆಳ್ತಂಗಡಿ: ತಾಲೂಕಿನ ಕಳಿಯ ಗ್ರಾಮ ಪಂಚಾಯತ್ ನ ಗ್ರಾಮ ಸಭೆಯ ಪೂರ್ವಭಾವಿಯಾಗಿ ಕಳಿಯ ಗ್ರಾಮದ ಪ್ರಥಮ ಮತ್ತು ದ್ವಿತೀಯ ವಾರ್ಡ್ ನ ಪ್ರಥಮ ಸುತ್ತಿನ ವಾರ್ಡ್ ಸಭೆಯು ಪಂಚಾಯತ್ ಸಭಾ ಭವನದಲ್ಲಿ ಅಧ್ಯಕ್ಷ ದಿವಾಕರ ಎಮ್ ಅಧ್ಯಕ್ಷತೆಯಲ್ಲಿ ಜರಗಿತು. ಗ್ರಾಮಸ್ಥರು ವಿವಿದ ಅಭಿವೃದ್ದಿ ವಿಷಯದ ಬಗ್ಗೆ ಚರ್ಚಿಸಿದರು. ಸತೀಶ್ ಭಂಡಾರಿ ನಾಳ ಅವರು ಪಂಚಾಯತ್ ವ್ಯಾಪ್ತಿಯ ರಸ್ತೆ ಬದಿಯಲ್ಲಿ ಎಲ್ಲೆಂದರಲ್ಲಿ ತ್ಯಾಜ್ಯ ಹಾಕುವುದು ಹೊರಗಡೆಯಿಂದ ತ್ಯಾಜ್ಯ ತಂದು ಹಾಕುತ್ತಿರುವವರ ಮೇಲೆ ಸೂಕ್ತ ಕಾನೂನು ಕ್ರಮವಹಿಸಿ ದಂಡ ವಿಧಿಸುವುದು ಮತ್ತು ಸಿ ಸಿ ಟಿವಿ ಅಳವಡಿಸುವಂತೆ ತಿಳಿಸಿದರು.

ಸಭೆಯಲ್ಲಿ ಉಪಾದ್ಯಕ್ಷೆ ಇಂದಿರಾ ಬಿ., ಅಭಿವೃದ್ಧಿ ಅಧಿಕಾರಿ ಸಂತೋಷ್ ಪಾಟೀಲ್, ಸದಸ್ಯರಾದ ಸುಭಾಷಿಣಿ ಕೆ., ಅಬ್ದುಲ್ ಕರೀಮ್’, ಮರೀಟಾ ಪಿಂಟೋ, ಶ್ವೇತಾ, ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಜನಾರ್ಧನ ಗೌಡ, ಉಮೇಶ್ ಗೋವಿಂದೂರು, ಕುಂಟಿನಿ ಅಂಗನವಾಡಿ ಕಾರ್ಯಕರ್ತೆ ಸುಜಾತ, ಸಿಬ್ಬಂದಿಗಳಾದ ರವಿ ಎಚ್., ಸುರೇಶ್ ಗೌಡ ಗ್ರಾಮಸ್ಥರು ಹಾಜರಿದ್ದರು.

Exit mobile version