Site icon Suddi Belthangady

ಬೆಳ್ತಂಗಡಿಗೆ ಬಂತು ಫ್ಯಾಷನ್ ಡಿಸೈನಿಂಗ್ ಕೋರ್ಸ್: ಡಿಪ್ಲೋಮಾ ಹಾಗೂ ಪಿ.ಜಿ. ಕೋರ್ಸ್ ನೀಡುತ್ತಿರುವ ಅನುಗ್ರಹ ಟ್ರೈನಿಂಗ್ ಕಾಲೇಜು ಆರಂಭೋತ್ಸವ ಸಮಾರಂಭ

ಬೆಳ್ತಂಗಡಿ: ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ ಫೇಲಾದ ಮಕ್ಕಳಿಗೆ ಮೌಲ್ಯಧಾರಿತ ಶಿಕ್ಷಣದ ಜೊತೆ ಕೌಶಲ್ಯ ತರಬೇತಿ ಕೊಡುವ ಬೆಳ್ತಂಗಡಿ ಸಂತೆಕಟ್ಟೆಯಲ್ಲಿರುವ ಅನುಗ್ರಹ ಟ್ರೈನಿಂಗ್ ಕಾಲೇಜಿನ ಪ್ರಾರಂಭೋತ್ಸವ ಸಮಾರಂಭ ಜು.14ರಂದು ನೆರವೇರಿತು. ಬೆಳ್ತಂಗಡಿಯಲ್ಲಿ ಪ್ರಪ್ರಥಮ ಬಾರಿಗೆ ಡಿಪ್ಲೊಮ ಮತ್ತು ಪಿ.ಜಿ. ಕೋರ್ಸುಗಳನ್ನು ಆರಂಭಿಸಿದ್ದು, ಇಲ್ಲಿ ಫೈರ್ ಆಂಡ್ ಸೇಫ್ಟಿ ಇಂಜಿನಿಯರಿಂಗ್, ಲಾಜಿಸ್ಟಿಕ್ & ಸಪ್ಲೈ ಚೈನ್ ಮ್ಯಾನೇಜ್ಮೆಂಟ್, ಎಸಿ & ರೆಫ್ರಿಜರೇಟರ್ ಮೆಕ್ಯಾನಿಕಲ್, ಹೆಲ್ತ್ & ಸೇಫ್ಟಿ ಇಂಜಿನಿಯರಿಂಗ್, ಫ್ಯಾಷನ್ ಡಿಸೈನಿಂಗ್, ಟೀಚರ್ಸ್ ಟ್ರೈನಿಂಗ್, ಏರೋನಾಟಿಕಲ್ ಮತ್ತು ಮರೈನ್ ಸೇಫ್ಟಿ ಇಂಜಿನಿಯರಿಂಗ್ ತರಬೇತಿ ನೀಡಲಾಗುತ್ತದೆ.

ಇದೀಗ ಅನುಗ್ರಹ ಟ್ರೈನಿಂಗ್ ಕಾಲೇಜು ಮಂಗಳೂರಿನ ಮಿನರ್ವ ಸರ್ಕಲ್ ನಲ್ಲಿ ಕಾರ್ಯಾಚರಿಸುತ್ತಿರುವ MIFSE ಸಂಸ್ಥೆ ಸಹಯೋಗದೊಂದಿಗೆ ಬೆಳ್ತಂಗಡಿಯ ಸಂತೆಕಟ್ಟೆಯಲ್ಲಿರುವ ಶ್ರೀರಾಮ ಕಾಂಪ್ಲೆಕ್ಸ್ ನಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ಕೊಡಲು ಸಜ್ಜಾಗಿದೆ.

ಕಳೆದ ಹತ್ತು ವರ್ಷಗಳಿಂದ ತಾಂತ್ರಿಕ ವೃತ್ತಿಪರ ತರಬೇತಿಗಳನ್ನು ನೀಡುತ್ತಿರುವ ಹಾಗೂ ಬೆಳ್ತಂಗಡಿಯ ಮೊದಲ ಫ್ಯಾಷನ್ ಡಿಸೈನಿಂಗ್ ಕಾಲೇಜೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಅನುಗ್ರಹ ಟ್ರೈನಿಂಗ್ ಕಾಲೇಜಿನ ಇನ್ನೊಂದು ಶಾಖೆಯನ್ನು ಮಂಗಳೂರಿನ ಮುಡಿಪುನಲ್ಲಿ ಆರಂಭಿಸಿದೆ.

ಪ್ರಾರಂಭೋತ್ಸವ ಸಮಾರಂಭದಲ್ಲಿ ಅನುಗ್ರಹ ಎಜುಕೇಶನ್ ಸೋಷಿಯಲ್ ವೆಲ್ವೇರ್ ಟ್ರಸ್ಟ್ ಹಾಗೂ ಅನುಗ್ರಹ ಟ್ರೈನಿಂಗ್ ಕಾಲೇಜು ಅನುಗ್ರಹ ಟ್ರೈನಿಂಗ್ ಸೆಂಟರ್ ನ ಅಧ್ಯಕ್ಷ ಎಂ. ಜಿ. ತಲ್ಲತ್ ಸವಣಾಲು ಸಭಾಧ್ಯಕ್ಷತೆ ವಹಿಸಿದ್ದರು. ಸುನ್ನಿ ಮ್ಯಾನೇಜೈಂಟ್ ಅಸೋಸಿಯೇಷನ್ (SMA)ರಾಜ್ಯಾಧ್ಯಕ್ಷ ಇಸ್ಮಾಯಿಲ್ ತಂಬಳ್ ಉಜಿರೆ, MIFSE ಮಿನರ್ವ ಕಾಲೇಜಿನ ಅಧ್ಯಕ್ಷ ವಿನೋದ್ ಕೆ. ಜೋನ್, ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕ್ಷೇತ್ರ ಸಮಿತಿ ಅಧ್ಯಕ್ಷ ಅಕ್ಟರ್ ಬೆಳ್ತಂಗಡಿ, ಹೋಲಿ ರೆಡಿಮೇರ್ ಆಂಗ್ಲ ಮಾಧ್ಯಮ ಶಾಲಾ ಪ್ರಾಂಶುಪಾಲ ರೆ.ಫಾ. ಕ್ಲಿಫರ್ಡ್ ಪಿಂಟೋ, ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎಂ. ನಾಗೇಶ್ ಕುಮಾರ್, ಅನುಗ್ರಹ ಟ್ರೈನಿಂಗ್ ಕಾಲೇಜು ನಿರ್ದೇಶಕರಾದ ಅಬ್ದುಲ್ ಖಾದರ್, ಮುಹಮ್ಮದ್ ತೌಸೀಫ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

Exit mobile version