ವೇಣೂರು: ಸುದೆರ್ದು ದಿ. ತಿಮ್ಮಪ್ಪ ಮೂಲ್ಯ ಅವರ ಮಗ ಸುರೇಶ್ ಮೂಲ್ಯ ಸುದೆರ್ದು(38 ವರ್ಷ) ಅಲ್ಪಕಾಲದ ಅಸೌಖ್ಯದಿಂದ ಜು. 14ರಂದು ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಇವರು ವೇಣೂರು ಯುವಕ ಮಂಡಲ, ಯುವ ಸೇವಾ ಸಂಗಮ, ಮೂಲ್ಯರ ಯಾನೆ ಕುಲಾಲರ ಸಂಘದ ಸಕ್ರೀಯ ಸದಸ್ಯರಾಗಿ ತೊಡಗಿಸಿಕೊಂಡಿದ್ದರು. ಮೃತರು ತಾಯಿ ಚೆನ್ನಮ್ಮ, ಸಹೋದರಿ ಮತ್ತು 5 ಸಹೋದರರನ್ನು ಅಗಲಿದ್ದಾರೆ.
ವೇಣೂರು: ಸುರೇಶ್ ಮೂಲ್ಯ ನಿಧನ
